
“ಭೂಜ್ವರ” ಎಂಬ ಪದವನ್ನು ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಕೇಳಿದಾಗ ಹಲವರಿಗೆ ಅದು ಒಂದು ಹೊಸಹೊಳಹಾಗಿತ್ತು. ಈ ನಡುವೆ ನದಿಗಳಲ್ಲಿ ಸಾಕಷ್ಟು ನೀರು ಹರಿದಿರಲಾರದು. ಹಾಗೆ ಹರಿಯಲು ವಾಡಿಕೆ ಮಳೆ ಸುರಿಯಬೇಕಷ್ಟೆ. ನೀರಿಗೂ ಜ್ವರಕ್ಕೂ ಏನು ಸಂಬಂಧ ಎಂದು ಕೇಳುವಿರೇನೋ! ಅದು ಉಷ್ಣತೆಗೂ ಶೀತಕ್ಕೂ ಇರುವ ಸಂಬಂಧಂತೆ ಎಂಬಂತೆ. ಮೇಲ್ನೋಟಕ್ಕೆ ತದ್ವಿರುದ್ಧ. ಒಂದು ಅತ್ಯಂತ ಉರಿ, ಮತ್ತೊಂದು ಅತೀವ ತಣ್ಣನೆ. ಆದರೆ ಒಳನೋಟದಲ್ಲಿ ಅವು ಒಂದೇ. ಕಡಮೆ ಉಷ್ಣತೆ ಮತ್ತು ಹೆಚ್ಚು ಉಷ್ಣತೆ ಎಂಬ ಆಯಾಮದಲ್ಲಿ ಅವು […]