
ಬ್ರಿಟಿಷರು ದಾಖಲೀಕರಣದ ವಿಷಯದಲ್ಲಿ ಕ್ರಮಬದ್ಧರು, ಶಿಸ್ತಿನ ಸಿಪಾಯಿಗಳು. ಕಾರಣಗಳು ಏನೇ ಇರಲಿ, ದಾಖಲೀಕರಣವನ್ನು ಅತ್ಯಂತ ಶಿಸ್ತುಬದ್ಧವಾಗಿ ಪ್ರಾಮಾಣಿಕವಾಗಿ ನಡೆಸುತ್ತಿದ್ದರು. ಹಾಗಾಗಿ ಬ್ರಿಟಿಷ್ ಆಡಳಿತಯಂತ್ರದಲ್ಲಿ ಓಡಾಡುತ್ತಿದ್ದ ದಾಖಲೆ-ಕಡತ-ಪತ್ರಗಳಲ್ಲಿ ಅಂಕಿ-ಅಂಶಗಳಿರಲಿ, ವೀಕ್ಷಣ ವಿವರಣೆಗಳಿರಲಿ, ಎಲ್ಲವೂ ಸುಸಂಬದ್ಧವಾಗಿದ್ದವು. ಅವುಗಳಲ್ಲಿದ್ದ ದೋಷ ಅತ್ಯಲ್ಪ. ನಿಜವಾದ ಇತಿಹಾಸ ತಿಳಿಯಬೇಕಾದರೆ ನಾವು ಓದಬೇಕಾದದ್ದು ಈ ದಾಖಲೆಗಳನ್ನೇ ಹೊರತು ಬ್ರಿಟಿಷ್ ವಿಲಾಸೀ ಇತಿಹಾಸಕಾರರು ಬರೆದ ಕಾಫಿ-ಟೇಬಲ್ ಪುಸ್ತಕಗಳನ್ನಲ್ಲ – ಎಂದು ಭಾವಿಸಿದವನು ಮೂವತ್ತರ ಆಸುಪಾಸಿನಲ್ಲಿದ್ದ ಓರ್ವ ತರುಣ. ಅವನ ಹೆಸರು ಧರ್ಮಪಾಲ್. ಕಾರಣಾಭಾವಾತ್ಕಾರ್ಯಾಭಾವಃ, ಸದಿತಿ ಯತೋ ದ್ರವ್ಯಗುಣಕರ್ಮಸು […]