
“ಮಾತೃಶ್ರೀ ರಮಾಬಾಯಿ ಪತಿ ಬಾಬಾಸಾಹೇಬರ ಆಜ್ಞೆಯಂತೆ, ೧೯೩೧ರಲ್ಲಿ ಧಾರವಾಡಕ್ಕೆ ಬರುತ್ತಾರೆ. ಡಿಪ್ರೆಸ್ಡ್ ಕ್ಲಾಸಸ್ ಸ್ಟುಡೆಂಟ್ಸ್ ವಸತಿ ನಿಲಯ ಆಗ್ಗೆ ತುಂಬ ಅಧೋಗತಿಗೆ ಇಳಿದಿರುತ್ತದೆ. ತಮ್ಮ ಮೈಮೇಲಿದ್ದ ಎಲ್ಲ ಬಂಗಾರದ ಒಡವೆಗಳನ್ನು ಮಾರಿ, ಅಲ್ಲಿನ ಮಕ್ಕಳಿಗಾಗಿ ಸುಸ್ಥಿತಿಯ ಕಟ್ಟಡ ಮತ್ತು ಊಟೋಪಚಾರಕ್ಕೆ ರೇಷನ್ ವ್ಯವಸ್ಥೆ ಮಾಡುತ್ತಾರೆ. ಸ್ವತಃ ಅಡುಗೆ ಮಾಡಿ ಹಸಿದ ಮಕ್ಕಳಿಗೆ ತುತ್ತು ಅನ್ನ ಬಡಿಸುತ್ತಾರೆ. ಕೈ ತುತ್ತು ನೀಡಿ, ಮನೋಬಲ ಕಾಯುತ್ತಾರೆ.” ತಳ ಸಮುದಾಯ ಮತ್ತು ಹಿಂದುಳಿದ ಸಮಾಜದ ಹೋರಾಟಗಳಿಗೆ ಧಾರವಾಡ ಇಂಬು ನೀಡಿದ್ದು ಅಷ್ಟಕ್ಕಷ್ಟೇ. […]