
ಭೂಮಿಯ ಮೇಲಿನ ಸ್ವರ್ಗವೆಂದೇ ಬಣ್ಣಿಸಲಾಗುತ್ತಿದ್ದ ಕಾಶ್ಮೀರ ಕಣಿವೆ ಇಂದು ನರಕಸದೃಶ ಸ್ಥಿತಿಗೆ ತಲುಪಿದೆ. ಇದಕ್ಕೆ ಕಾರಣ ಇತ್ತೀಚೆಗೆ ಅಲ್ಲಿ ಸಂಭವಿಸಿದ ಭೀಕರ ಪ್ರಳಯದಾಟ. ಈ ಶತಮಾನದವಧಿಯಲ್ಲೆ ಕಂಡು ಕೇಳರಿಯದ ಭಾರಿ ಮಳೆ ಹಾಗೂ ಭೀಕರ ಪ್ರವಾಹ ಜಮ್ಮು-ಕಾಶ್ಮೀರ ರಾಜ್ಯವನ್ನು ಸಂಪೂರ್ಣ ಕೊಚ್ಚಿ ಹಾಕಿದೆ. ಇನ್ನೂರಕ್ಕೂ ಹೆಚ್ಚು ಮಂದಿ ಈ ಭೀಕರ ಪ್ರವಾಹದಿಂದ ಸಾವಿಗೀಡಾಗಿದ್ದಾರೆ. ಆದರೆ ವಾಸ್ತವವಾಗಿ ಸಾವಿಗೀಡಾದವರ ನಿಖರ ಸಂಖ್ಯೆ ಇನ್ನೂ ಹೆಚ್ಚಿರಬಹುದು. ೧೫೦೦ ಹಳ್ಳಿಗಳು ಪ್ರವಾಹದಿಂದ ನಲುಗಿ ಹೋಗಿವೆ. ೩೯೦ ಹಳ್ಳಿಗಳು ಪ್ರವಾಹದಲ್ಲಿ ಅಕ್ಷರಶಃ ಮುಳುಗಿವೆ. […]