ಎರಡೂವರೆ ತಿಂಗಳಿನಷ್ಟು ದೀರ್ಘ ಅವಧಿಯಲ್ಲಿ ಹರಡಿಕೊಂಡು ಯಶಸ್ವಿಯಾಗಿ ಮುಗಿದು ಫಲಿತಾಂಶವನ್ನೂ ಹೊರಹಾಕಿರುವ ಈಚಿನ ಸಾರ್ವತ್ರಿಕ ಚುನಾವಣೆಯತ್ತ ಹಿನ್ನೋಟ ಬೀರಿದಲ್ಲಿ ತ್ರಯಸ್ಥವಾಗಿ ಚಿಂತಿಸುವ ಯಾರೂ ವಿಸ್ಮಯಗೊಳ್ಳದಿರಲಾರರು. ಆರೋಪ-ಪ್ರತ್ಯಾರೋಪಗಳು, ಕೇಳರಿಯದ ಆಮಿಷ-ಪ್ರಲೋಭನೆಗಳು, ರಾಡಿಯ ವಿನಿಮಯವೇ ಸಂವಾದಭಾಷೆಯಾಗಿರುವುದು – ಇವೆಲ್ಲ ಹಾಗಿರಲಿ. ಈ ಯಾವವೂ ಚುನಾವಣೆಯ ಪ್ರಕ್ರಿಯೆಯನ್ನು ಶಿಥಿಲಗೊಳಿಸಲಿಲ್ಲ. ಚುನಾವಣೆಯ ಕಲಾಪದ ಗಾತ್ರವೇ ದಿಗ್ಭ್ರಮೆ ತರುವಂತಹದು – ೬೪.೨ ಕೋಟಿಯಷ್ಟು ಅಧಿಕ ಮತದಾರರು: ಎಂದರೆ ಜಿ-೭ ದೇಶಗಳ ಒಟ್ಟು ಮತದಾರರ ಒಂದೂವರೆಪಟ್ಟು; ಯೂರೋಪಿಯನ್ ಒಕ್ಕೂಟದ ಅಷ್ಟೂ ಮತದಾರರ ಎರಡೂವರೆಪಟ್ಟು. ಇದೊಂದು ವಿಶ್ವ […]
ಸಾಂವಿಧಾನಿಕತೆಯ ಗೆಲವು
Month : September-2024 Episode : Author :