ಕೊರೋನಾ ಸಾಂಕ್ರಾಮಿಕ ನಿಮಿತ್ತ ಎರಡು ಆವರ್ತ ಲಾಕ್‌ಡೌನ್ ಪರ್ವಗಳನ್ನು ದಾಟಿದ್ದು ಆಗಿದೆ. ಸಾಂಕ್ರಾಮಿಕದ ಪ್ರಕರ್ಷವು ರಕ್ತಬೀಜಾಸುರನನ್ನು ನೆನಪಿಸುತ್ತಿದೆ. ಮೊದಲ ಹಂತಕ್ಕಿಂತ ಆಮೇಲಿನ ಹಂತಗಳು ಹೆಚ್ಚು ಆಘಾತಕಾರಿ ಎನಿಸಿದವು. ಎರಡನೇ ‘ಅಲೆ’ ತಹಬಂದಿಗೆ ಬರುತ್ತಿದ್ದ ಹಾಗೆಯೆ ‘ಬ್ಲ್ಯಾಕ್ ಫಂಗಸ್’ ಇಣುಕಿ ನೋಡುತ್ತಿದೆ. ಮೂರನೇ ಅಲೆಯ ಬಗೆಗೂ ತಜ್ಞರು ಎಚ್ಚರಿಕೆಯನ್ನು ನೀಡುತ್ತಾ ಬರುತ್ತಿದ್ದಾರೆ. ವಿಜ್ಞಾನ ಸಮುದಾಯಕ್ಕೂ ಈಗಿನದು ಅಭೂತಪೂರ್ವ ಸವಾಲೇ ಆಗಿದೆ. ಆದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಕಾಲಿಕ ದಿಟ್ಟ ಕ್ರಮಗಳಿಂದಾಗಿ ಲಕ್ಷಾಂತರ ಜೀವಗಳು ಉಳಿದವೆಂಬುದತೂ ವಿವಾದಾತೀತವಾಗಿದೆ. ವೈದ್ಯಕೀಯ […]
ಮನಸ್ಸಿಗೂ ವ್ಯಾಕ್ಸೀನ್ ಬೇಕಾಗಿದೆ
Month : July-2021 Episode : Author :