
ಒಂದಕ್ಕೆ ಒಂದನ್ನು ಸೇರಿಸಿದರೆ ಎರಡು ಆಗುವುದಕ್ಕೆ ಬದಲು ಹನ್ನೊಂದು ಆಗುವ ಸಂದರ್ಭಗಳು ಇರುತ್ತವೆ. ಕಳೆದ ಜುಲೈ ಮೂರರಂದು ನಸುಕಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನಿಮು ಪರ್ವತಾಗ್ರ ಪ್ರಾಂತಕ್ಕೆ ನೀಡಿದ ಭೇಟಿ ಅಂತಹ ಒಂದು ಸಂದರ್ಭ. ವಾಸ್ತವವಾಗಿ ಪೂರ್ವನಿಶ್ಚಿತ ಯೋಜನೆಯಂತೆ ರಕ್ಷಣಾ ಸಚಿವ ರಾಜನಾಥಸಿಂಗ್ ಅಲ್ಲಿಗೆ ಭೇಟಿ ನೀಡುವುದಿತ್ತು. ಆದರೆ ಕೊನೆಯ ಘಳಿಗೆಯಲ್ಲಿ ಪ್ರಧಾನಿಗಳೇ ಗಡಿಭಾಗಕ್ಕೆ ಧಾವಿಸಿದುದು ಅತ್ಯಂತ ಪ್ರೇರಣಾದಾಯಕವೆನಿಸಿತು. ಸೈನಿಕರನ್ನು ಉದ್ದೇಶಿಸಿ ಮಾತನಾಡುವಾಗ ಪ್ರಧಾನಿಗಳ ಚಹರೆಯಲ್ಲಿ ಎದ್ದುಕಾಣುತ್ತಿದ್ದ ಆತ್ಮವಿಶ್ವಾಸ ಮತ್ತು ದಾಢ್ರ್ಯವಂತೂ ಅತುಲನೀಯವಾಗಿದ್ದವು. ನಮ್ಮ ಸಮರ್ಪಿತ ಸೈನಿಕರನ್ನು […]