
ಇಲ್ಲಿಯವರೆಗೆ…… ಡಿಟೆಕ್ಟಿವ್ ವಿಜಯ್ಗೆ ಜನಪ್ರಿಯ ತಾರೆ ಮೃದುಲಾ ಹೊಸಮನಿ ಬ್ಲಾಕ್ಮೇಲ್ ಕೇಸ್ ಹಾಗೂ ತನ್ನ ಜನ್ಮರಹಸ್ಯವನ್ನು ಪತ್ತೆಮಾಡುವ ಕೆಲಸವನ್ನು ವಹಿಸಿದಳು. ವಿಜಯ್ ಸಂಬಂಧಿಸಿದ ದಾಖಲೆಗಳನ್ನು ಹುಡುಕಿ ಪರಿಶೀಲಿಸುವುದಕ್ಕೋಸ್ಕರ ತಮಿಳುನಾಡು-ಕೇರಳ ಗಡಿ ಭಾಗದ ಕರ್ಪೂರೀ ನದೀ ತೀರದ ಮಾಂಡಿಚೆರ್ರಿಗೆ ತೆರಳುತ್ತಾನೆ. ಮಾಂಡಿಚೆರ್ರಿಯಲ್ಲಿ ಲಾಯರ್ ಲೂಸಿಯಾ ಜೊತೆಗೂಡಿ ಬ್ಲಾಕ್ಮೇಲ್ ಕೇಸಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಸಂಗ್ರಹಿಸಿಕೊಂಡು, ಮೃದುಲಾಳ ದತ್ತಕದ ದಾಖಲೆ ಫೈಲ್ಗಳಿಗಾಗಿ ಸರಕಾರಿ ಕಛೇರಿಗೆ ಅಲೆದಾಡಲು ಆರಂಭಿಸುತ್ತಾನೆ…..