
ರೈತನ ಹಾಡು-ಪಾಡು ೧ ಭೂಮಿತಾಯಿಯ ಬೆವರು ಅಂತರ್ಜಲವಾಗಿ ಜಿನುಗಿ ಜುಳುಜುಳು ನಾದವಾಗಿ ಬಂತೈ ಗಂಗೆಯ ತೇರು! ಝರಿ, ಹಳ್ಳ, ತೊರೆಯಾಗುತ್ತ ತೊರೆ ತುಂಬಿ ಹೊಳೆಯಾಗಿ ಕಾಡುಮೇಡಲೆಯುತ್ತ ಸಾಗಿ ಬೆಟ್ಟ ಹತ್ತಿ ಕಣಿವೆಗೆ ಧುಮುಕುತ್ತ ನಿರಂತರ ಓಟವೇ ಆತ್ಮಬಲ! ದಣಿದಷ್ಟು ಚಿಮ್ಮೋ ಹುಮ್ಮಸ್ಸು ಹರಿವ ಹುಳಿಕಿಯೇ ಯಶಸ್ಸು ಜಗವೇ ಬೆವರ ಮಾಯಾಜಾಲ ಮಳೆ ಹೊಳೆ ಬೆವರ ರೂಪಾಂತರ; ಜಂಗಮವೆಲ್ಲ ಸಂಗಮಿಸೆ ಮಹಾಸಾಗರ! ೨ ಕಿಸಾನ್ ಚಾನೆಲ್ಲಿಗೆ ರಾಯಭಾರಿಯಾದರೆ ಅಮಿತಾಭ ಬಚ್ಚನ್‌ಗೆ ರೂಪಾಯಿ ಆರು ಕೋಟಿ! ಖರೆ ಖರೆ….. ಉತ್ತಿ […]