
ಶ್ರೇಷ್ಠಿ ನಾಣ್ಯಗಳನ್ನು ಎಣಿಸುತ್ತಿದ್ದ. ಆತನ ಮಗ, ಸುಮಾರು ಹತ್ತು ವ?ದವ, ಸನಿಯದಲ್ಲೆ ಆಟವಾಡಿಕೊಂಡಿದ್ದ. “ಅಪ್ಪಾಜಿ, ಯಾರೋ ಬಂದಿದ್ದಾರೆ. ಕವಿಗಳಂತೆ.” ಶ್ರೇಷ್ಠಿಯು ಗಹನವಾದ ಆಲೋಚನೆಯಲ್ಲಿದ್ದ. ಮಗನ ಮಾತು ಅವನ ಕಿವಿಯ ಮೇಲೆ ಬಿದ್ದಂತಿರಲಿಲ್ಲ. ಬೆರಳಿನ ತುದಿಯಲ್ಲಿ ಲೆಕ್ಕವನ್ನು ಮುಂದುವರೆಸಿದ್ದ. ಸ್ವಲ್ಪ ಸಮಯ ಕಳೆಯಿತು. ಮಗ ಈ ಬಾರಿ ಅಪ್ಪನ ಹತ್ತಿರ ಬಂದು ಅವನ ಭುಜವನ್ನು ಅಲ್ಲಾಡಿಸುತ್ತ ಹೇಳಿದ, “ಅಪ್ಪಾಜೀ, ಯಾರೋ ಕವಿಗಳಂತೆ. ನಿಮ್ಮನ್ನು ನೋಡಲು ಬಂದಿದ್ದಾರೆ” ಶ್ರೇಷ್ಠಿ ಕತ್ತೆತ್ತಿ ನೋಡಿದ. ಹತ್ತಿರದಲ್ಲಿ ಸಾಧಾರಣ ಮೈಕಟ್ಟಿನ ವ್ಯಕ್ತಿಯೊಬ್ಬ ನಿಂತಿದ್ದ. ಬಂದ […]