
ಶಾಲೆಗೆ ರಜೆ ಇದೆಯಲ್ಲ ಎಂದು ನಗರದ ಸಂಬಂಧಿಗಳ ಮನೆಗೆ ಹೋಗುವ ಮಕ್ಕಳು, ಅಲ್ಲಿನ ವೈಭವದ ಮನೆ, ತಿನ್ನುವ ಆಹಾರ, ಮನೆಯಲ್ಲಿ ಇರುವ ಆಧುನಿಕ ಯಂತ್ರಗಳು, ಪರಿಕರಗಳು, ಅವರ ಮನೆಯಲ್ಲಿ ಇರುವ ಚಪ್ಪಲಿ, ಶೂಗಳ ರಾಶಿ. ವಾರಾಂತ್ಯದ ಮೋಜು ಇತ್ಯಾದಿಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ ಊರಿಗೆ ಮರಳಿದಾಗ ಇನ್ನೊಂದು ರೀತಿಯ ಗೋಳು ಹಳ್ಳಿಯಲ್ಲಿ ಅಥವಾ ಮೂಲಮನೆಯಲ್ಲಿ ಇರುವ ಪೋಷಕರಿಗೆ. ಬೆಳ್ಳಂಬೆಳಗ್ಗೆ ಹುಲ್ಲು ಸವರಲು ಬಂದಿದ್ದ ಗುಲಾಬಿಯದ್ದು ಒಂದೇ ರಾಗ. “ಅಯ್ಯೋ ಅಮ್ಮಾ ಮನೆಗ್ ಬೆಂಗಳೂರಿನ ನೆಂಟ್ರ್ ಬಂದ್ ಹೋದ್ ಅಂಬ್ದ್ […]