ಗುಣಾನಾಂ ವಾ ವಿಶಾಲಾನಾಂ ಸತ್ಕಾರಾಣಾಂ ಚ ನಿತ್ಯಶಃ | ಕರ್ತಾರಃ ಸುಲಭಾ ಲೋಕೇ ವಿಜ್ಞಾತಾರಸ್ತು ದುರ್ಲಭಾಃ || – ಭಾಸ : ಸ್ವಪ್ನವಾಸವದತ್ತ “ಉತ್ಕೃಷ್ಟ ಗುಣಗಳಿಂದ ಕೂಡಿದವರೂ ಸದಾ ಸತ್ಕಾರ್ಯಗಳನ್ನು ಮಾಡುವ ಸ್ವಭಾವದವರೂ ಸ್ವಲ್ಪ ಹುಡುಕಿದರೆ ಲೋಕದಲ್ಲಿ ಸಿಕ್ಕಿಯಾರು. ಆದರೆ ಅನ್ಯರ ಒಳ್ಳೆಯತನವನ್ನು ಗುರುತಿಸಿ ಅಭಿನಂದಿಸುವುದರಲ್ಲಿ, ಕೃತಜ್ಞತೆಯನ್ನು ವ್ಯಕ್ತಮಾಡುವುದರಲ್ಲಿ ಸಹಜವಾದ ಉತ್ಸಾಹ ತೋರುವವರು ಕಡಮೆ.” ಸುಸಂಸ್ಕೃತರ ಲಕ್ಷಣಗಳಲ್ಲಿ ಕೃತಜ್ಞತಾಭಾವಕ್ಕೆ ನಮ್ಮ ಪರಂಪರೆಯಲ್ಲಿ ಉಚ್ಚ ಸ್ಥಾನವಿದೆ. ದೆಹಲಿಗೆ ಅನತಿ ದೂರದಲ್ಲಿ ಸಾರವಲ ಎಂಬ ಗ್ರಾಮ. ಅಲ್ಲೊಂದು ಬಾವಿ ಇದೆ. […]
ದೀಪ್ತಿ
Month : October-2024 Episode : Author :