ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
61ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ದೀಪ್ತಿ

ದೀಪ್ತಿ

ದೀಪ್ತಿ

ಯಃ ಪ್ರಾಪ್ಯ ದುಷ್ಪ್ರಾಪಮಿದಂ ನರತ್ವಂ ಧರ್ಮಂ ನ ಯತ್ನೇನ ಕರೋತಿ ಮೂಢಃ | ಕ್ಲೇಶಪ್ರಬಂಧೇನ ಸ ಲಬ್ಧಮಬ್ಧೌ ಚಿಂತಾಮಣಿ ಪಾತಯತಿ ಪ್ರಮಾದಾತ್ ||                  – ಸೋಮಪ್ರಭಾಚಾರ್ಯನ ‘ಸೂಕ್ತಿಮುಕ್ತಾವಲಿ’ “ತುಂಬಾ ದುರ್ಲಭವಾದ ಮನುಷ್ಯಜನ್ಮವನ್ನು ಪಡೆದೂ ಯಾವನು ಧರ್ಮವನ್ನು ಆಚರಿಸುವುದಿಲ್ಲವೋ ಅವನದು ಮೂಢತನವೆಂದು ಹೇಳಬೇಕು. ಅಂಥವನ ಬದುಕು ಕಷ್ಟಪಟ್ಟು ಪಡೆದ ಅಮೂಲ್ಯ ಚಿಂತಾಮಣಿಯನ್ನು ಅಜಾಗರೂಕತೆಯಿಂದ ಸಮುದ್ರದಲ್ಲಿ ಬಿಸಾಡಿದ ಹಾಗೆ ಆಗುತ್ತದೆ.” ಒಬ್ಬ ವ್ಯಕ್ತಿಗೆ ತನಗೆ ಲಭಿಸಿರುವ ಮನುಷ್ಯಜನ್ಮ ಎಷ್ಟು ಅಮೂಲ್ಯವೆಂಬುದರ ಮನವರಿಕೆ ಇದ್ದಲ್ಲಿ ಅವನು ಜೀವನವನ್ನು ವ್ಯರ್ಥ […]

ದೀಪ್ತಿ

ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಷ್ಕೃತಿಕೋಲಸಃ | ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ ||                          – ಭಗವದ್ಗೀತಾ, ೧೮:೨೮ “ಅಜಾಗರೂಕತೆ, ಸಂಸ್ಕಾರಹೀನತೆ, ಅವಿನಯ, ಶಠತೆ, ಕಾರ್ಯಶೀಲತೆ ಇಲ್ಲದಿರುವುದು, ಆಲಸ್ಯ, ನಿಷ್ಕಾರಣ ವಿಷಾದಪಡುವುದು, ದೀರ್ಘಸೂತ್ರತೆ – ಈ ಸ್ವಭಾವಗಳನ್ನು ಬೆಳೆಸಿಕೊಂಡವನು ‘ತಾಮಸ ಕರ್ತ’ನೆನಿಸುತ್ತಾನೆ.” ಆಗಬೇಕಾದ ಕೆಲಸಗಳಿಂದ ವಿಮುಖರಾಗುವುದು, ಕಲ್ಪಿತ ಕಾರಣಗಳನ್ನು ಮುಂದೊಡ್ಡಿ ನಿರ್ಣಯಗಳನ್ನು ಮುಂದಕ್ಕೆ ಹಾಕುವುದು, ಏನೋ ತೊಂದರೆಯಾಗುತ್ತದೆಂದು ಶಂಕೆಪಟ್ಟು ನಿಷ್ಕ್ರಿಯರಾಗಿರುವುದು – ಇಂತಹ ದೀರ್ಘಸೂತ್ರತೆಯು ವೈಯಕ್ತಿಕ ವಹಿವಾಟುಗಳಲ್ಲಿಯೂ ಸಾರ್ವಜನಿಕ ಕ್ಷೇತ್ರಗಳಲ್ಲಿಯೂ ಅದಕ್ಷತೆಯಲ್ಲಿ ಪರಿಣಮಿಸುತ್ತದೆ. […]

ದೀಪ್ತಿ

ಕಿಂ ತರ್ಕೇಣ ವಿತರ್ಕಿತೇನ ಶತಶೋ ಜ್ಞಾತೇನ ಕಿಂ ಛಂದಸಾಕಿಂ ಪೀತೇನ ಸುಧಾರಸೇನ ಬಹುಧಾ ಸ್ವಾಧ್ಯಾಯಪಾಠೇನ ಕಿಂ |ಅಭ್ಯಸ್ತೇನ ಚ ಲಕ್ಷಣೇನ ಕಿಮಹೋ ಧ್ಯಾನಂ ನ ಚೇತ್ ಸರ್ವಥಾಲೋಕಾಲೋಕವಿಲೋಕನೈಕಕುಶಲಜ್ಞಾನೇ ಹೃದಿ ಬ್ರಹ್ಮಣಃ || – ಪದ್ಮನಂದನ ವೈರಾಗ್ಯಶತಕ “ವಾದಕ್ಕಾಗಿ ಮಂಡಿಸುವ ತರ್ಕದಿಂದ ಏನು ಫಲ ದೊರೆತೀತು? ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಛಂದಃಶಾಸ್ತ್ರವನ್ನು ಅರಿಯುವುದರಿಂದೇನು? ಅಮೃತರಸವನ್ನೇ ಕುಡಿದರೂ ಏನು ತಾನೆ ಆದೀತು? ಪುನಃಪುನಃ ವೇದವನ್ನು ಪಾರಾಯಣ ಮಾಡುತ್ತಿರುವುದರಿಂದ ಆಗುವ ಲಾಭವೇನು? ಲಕ್ಷಣಶಾಸ್ತ್ರವನ್ನು ಸ್ವಾಧೀನ ಮಾಡಿಕೊಳ್ಳುವುದರಿಂದ ಆಗುವುದೇನು? ಎಲ್ಲವನ್ನೂ ಗ್ರಹಿಸಿಕೊಳ್ಳಬಲ್ಲ ಹೃದಯದೊಳಗಡೆ ಪರಬ್ರಹ್ಮವಸ್ತುವಿನ […]

ದೀಪ್ತಿ

ದೀಪ್ತಿ

ಅಯಮುತ್ತಮೋsಯಮಧಮೋ ಜಾತ್ಯಾ ರೂಪೇಣ ಸಂಪದಾ ವಯಸಾ | ಶ್ಲಾಘ್ಯೋýಶ್ಲಾಘ್ಯೋ ವೇತ್ಥಂ ನ ವೇತ್ತಿ ಭಗವಾನನುಗ್ರಹಾವಸರೇ || – ಪ್ರಬೋಧಸುಧಾಕರ “ಜಾತಿ, ರೂಪ, ಸಂಪತ್ತು, ವಯಸ್ಸು – ಇಂತಹ ಅಂಶಗಳನ್ನು ಗಣಿಸಿ ಈ ವ್ಯಕ್ತಿ ಉತ್ತಮ, ಇವನು ಅಧಮ, ಇವನು ಎತ್ತರದವನು, ಇವನು ಕೆಳಗಿನವನು ಎಂದು ಭಗವಂತನು ಅನುಗ್ರಹ ಕರುಣಿಸುವ ಸಮಯದಲ್ಲಿ ಲೆಕ್ಕಾಚಾರ ಮಾಡುವುದಿಲ್ಲ.” ಭಕ್ತಿಯ ಮತ್ತು ಭಗವದನುಗ್ರಹದ ಸಾಮ್ರಾಜ್ಯವು ವ್ಯಾವಹಾರಿಕರೀತಿಯ ಮೇಲು-ಕೀಳು ಎಂಬ ಪರಿಗಣನೆಗಳಿಂದ ಅತೀತವಾದ್ದು ಎಂದು ಬೋಧಿಸುವ ಪೌರಾಣಿಕ-ಜಾನಪದ ಪ್ರಸಂಗಗಳು ಹೇರಳವಾಗಿವೆ. ಅಂತಹ ಒಂದು ದಾರ್ಶನಿಕ […]

ದೀಪ್ತಿ

ಅತಸ್ಕರಗ್ರಾಹ್ಯಮರಾಜಕವಶಂವದಂ | ಅದಾಯಾದವಿಭಾಗಾರ್ಹಂ ಧನಮಾರ್ಜಯ ಸುಸ್ಥಿರಮ್ || “ಕಳ್ಳರು ಕದ್ದುಕೊಂಡುಹೋಗಲಾಗದ, ರಾಜಭಟರು ವಶಪಡಿಸಿಕೊಳ್ಳಲಾಗದ, ದಾಯಾದಿಗಳು ಪಾಲು ಕೇಳಲಾಗದ ಸುಸ್ಥಿರವಾದ ಶ್ರೇಷ್ಠ ಧನವನ್ನು ಸಂಪಾದಿಸು.” ವ್ಯಾವಹಾರಿಕ ಜಗತ್ತಿನಲ್ಲಿ ವ್ಯಕ್ತಿಯು ಗಳಿಸಬಹುದಾದ ಧನವೆಲ್ಲ ವ್ಯಯವಾಗುತ್ತದೆ ಇಲ್ಲವೆ ಬೇರೆಯವರ ಕೈ ಸೇರುತ್ತದೆ. ಆದರೆ ಪಾರಮಾರ್ಥಿಕ ಸಾಧನೆಯ ಮೂಲಕ ಸಂಪಾದಿಸಿಕೊಂಡ ನೆಮ್ಮದಿ, ಪ್ರಶಾಂತಿ, ಭಗವದನುಗ್ರಹ – ಇವನ್ನು ಯಾರೂ ನಮ್ಮಿಂದ ಕಸಿದುಕೊಳ್ಳಲಾರರು. ಆದ್ದರಿಂದ ವಿವೇಕಿಯ ಲಕ್ಷ್ಯವು ಅಂತಹ ಸ್ಥಿರವಾದ ಐಶ್ವರ್ಯದ ಗಳಿಕೆಯ ಕಡೆಗೆ ಇರಬೇಕು. ಅನುಪಮ ಭಗವದ್ಭಕ್ತರಾದ ಸಂತ ತುಕಾರಾಮರ ಬಾಹ್ಯ ಬದುಕು […]

ದೀಪ್ತಿ

ದೀಪ್ತಿ

ಕರ್ಮಣಾ ಜಾಯತೇ ಸರ್ವಂ ಕರ್ಮೈವ ಗತಿಸಾಧನಂ | ತಸ್ಮಾತ್ ಸರ್ವಪ್ರಯತ್ನೇನ ಸಾಧು ಕರ್ಮ ಸಮಾಚರೇತ್ || – ವಿಷ್ಣುಪುರಾಣ “ಜಗತ್ತಿನಲ್ಲಿ ಎಲ್ಲವೂ ಆಗುವುದು ಕರ್ಮಾಚರಣೆಯ ಮೂಲಕವೇ. ಉನ್ನತಿಗೋ ಅಧೋಗತಿಗೋ ಎಲ್ಲಕ್ಕೂ ಕಾರಣವಾಗುವುದು ಕರ್ಮಾಚರಣೆಯೇ. ಆದುದರಿಂದ ಇಷ್ಟಾನಿಷ್ಟಗಳಿಗೆ ಬಲಿಬೀಳದೆ ಆಲಸ್ಯ-ಅಲಕ್ಷ್ಯಗಳಿಗೆಡೆಗೊಡದೆ ವಿವೇಚನಪೂರ್ವಕವಾಗಿ ಲಬ್ಧ ಕರ್ಮಗಳನ್ನು ಪಾಲುಮಾರದೆ ನಡೆಸಬೇಕು.” ನಮ್ಮ ಇಡೀ ಜೀವನವಷ್ಟೂ ಕರ್ಮಾವಲಂಬಿಯಾದದ್ದು. ಇದರಿಂದ ಯಾರಿಗೂ ವಿನಾಯತಿ ಇಲ್ಲವೆಂಬುದು ಪ್ರಕೃತಿನಿಯಮ. ಆದರೆ ನಮ್ಮ ಪಾಲಿಗೆ ಬಂದ ಕೆಲಸವನ್ನು ಮನಃಪೂರ್ವಕವಾಗಿಯೂ ಉತ್ಸಾಹಪೂರ್ಣವಾಗಿಯೂ ಮಾಡುವುದರಿಂದ ಧನ್ಯತಾಭಾವವೂ ಪ್ರಸನ್ನತೆಯೂ ಉಂಟಾಗುತ್ತವೆ. ಒದಗಿದ ಕರ್ತವ್ಯದ […]

ದೀಪ್ತಿ

ದೀಪ್ತಿ

ಸಂಪ್ರಸನ್ನೇ ಭಗವತಿ ಪುರುಷಃ ಪ್ರಾಕೃತೈರ್ಗುಣೈಃ | ವಿಮುಕ್ತೋ ಜೀವನಿರ್ಮುಕ್ತೋ ಬ್ರಹ್ಮನಿರ್ವಾಣಮೃಚ್ಛತಿ ||                                           – ಭಾಗವತ “ಭಗವಂತನು ಪ್ರಸನ್ನನಾದರೆ ಮನುಷ್ಯನು ತನ್ನ ಪ್ರಾಕೃತಗುಣಗಳ ಸಂಕೋಲೆಗಳಿಂದ ಬಿಡುಗಡೆ ಹೊಂದಿ ತನ್ನ ಜೀವಭಾವವನ್ನು ಕೊಡವಿಕೊಂಡು ಪರಬ್ರಹ್ಮಸ್ವರೂಪವಾದ ಮೋಕ್ಷಪದವಿಗೆ ಸೇರಿಕೊಳ್ಳುತ್ತಾನೆ.” ಭಗವಂತನ ಕೃಪೆಗೆ ನಾವು ಅರ್ಹರಾಗಬೇಕಾದರೆ ಅವನಲ್ಲಿ ನಮಗೆ ಅಸ್ಖಲಿತ ಪ್ರೇಮವೂ ಅವನು ನಮ್ಮನ್ನು ಸಂರಕ್ಷಿಸುತ್ತಾನೆಂಬ ಪೂರ್ಣ ವಿಶ್ವಾಸವೂ ಇರುವುದು ಆವಶ್ಯಕ. ಆದರೆ ನಮ್ಮ ಶ್ರದ್ಧೆಯನ್ನು ನಾವು ಶಬಲಿತಗೊಳಿಸಿಕೊಳ್ಳುವುದು ನಮ್ಮ ದೌರ್ಬಲ್ಯ. ಪ್ರಾಕೃತ ಪ್ರವೃತ್ತಿಗಳನ್ನು ಮೀರಲು ಯತ್ನಿಸುವುದು ಉತ್ಕರ್ಷಮಾರ್ಗದ ಮೊದಲ ಹೆಜ್ಜೆ. […]

ದೀಪ್ತಿ

ದೀಪ್ತಿ

ತತ್ತ್ವಮಾತ್ಮಸ್ಥಮಜ್ಞಾತ್ವಾ ಮೂಢಃ ಶಾಸ್ತ್ರೇಷು ಮುಹ್ಯತಿ | ಗೋಪಃ ಕಕ್ಷಗತೇ ಛಾಗೇ ಕೂಪೇ ಪಶ್ಯತಿ ದುರ್ಮತಿಃ ||     – ಗರುಡಪುರಾಣ ತನ್ನೊಳಗೇ ಇರುವ ತತ್ತ್ವವನ್ನು ಅರಿತುಕೊಳ್ಳದೆ ಮೂಢನು ತತ್ತ್ವವನ್ನು ಕಾಣಲು ಗ್ರಂಥಗಳಲ್ಲೆಲ್ಲ ಹುಡುಕಾಡುತ್ತಾನೆ. ಕುರಿ ಕಾಯುವವನು ತನ್ನ ಬಗಲಲ್ಲಿಯೆ ಮೇಕೆಯನ್ನು ಇಟ್ಟುಕೊಂಡಿರುವುದನ್ನು ಮರೆತು ಅದೇನಾದರೂ ಬಾವಿಯಲ್ಲಿ ಬಿದ್ದಿರಬಹುದೇನೊ ಎಂದು ಬಗ್ಗಿ ನೋಡುತ್ತಾನೆ. ತನಗೆ ಅದು ಬೇಕು ಇದು ಬೇಕು ಎಂದು ಸದಾ ಹಪಹಪಿಸುವುದನ್ನು ಅಭ್ಯಾಸ ಮಾಡಿಕೊಂಡವನಿಗೆ ತನ್ನಲ್ಲಿ ಈಗಾಗಲೇ ಇರುವ ಭಾಗ್ಯದ ಕಡೆಗೆ ಲಕ್ಷ್ಯವೇ ಇರುವುದಿಲ್ಲ. ಸಂತೃಪ್ತಿಯ […]

ದೀಪ್ತಿ

ದೀಪ್ತಿ

ಋಣಶೇಷಶ್ಚಾಗ್ನಿಶೇಷಃ ಶತ್ರುಶೇಷಸ್ತಥೈವ ಚ | ಪುನಃ ಪುನಃ ಪ್ರವರ್ತಂತೇ ತಸ್ಮಾಚ್ಛೇಷಂ ನ ರಕ್ಷಯೇತ್ || “ಮಾಡಿರುವ ಸಾಲದ ಒಂದಂಶ, ಉರಿಯುವ ಬೆಂಕಿಯ ಒಂದಂಶ, ಶತ್ರುಶೇಷ – ಇವು ಉಳಿದಿದ್ದಲ್ಲಿ ಮತ್ತೆ ಮತ್ತೆ ನಮ್ಮನ್ನು ಕಾಡುತ್ತಿರುತ್ತವೆ. ಆದ್ದರಿಂದ ಈ ಮೂರು ರೀತಿಯ ಋಣಗಳನ್ನು ಸ್ವಲ್ಪವೂ ಉಳಿಸಬಾರದು. ತಾವು ಮಾಡಿದ ಋಣಗಳನ್ನು ಮುಂದಿನವರಿಗೆ ಉಳಿಸುವುದು ತಪ್ಪು, ನಿರ್ಗಮನಕ್ಕೆ ಮುಂಚೆ ಸಾಲಗಳನ್ನು ನಿಃಶೇಷಗೊಳಿಸಿರಬೇಕು – ಎಂಬುದು ಧಾರ್ಮಿಕ, ವ್ಯಾವಹಾರಿಕ – ಎರಡೂ ದೃಷ್ಟಿಗಳಿಂದ ಗೌರವಿಸಬೇಕಾದ ತತ್ತ್ವ. ತಾನು ಋಣಿಯಾಗಿ ಸಾಯಬಾರದು – […]

ದೀಪ್ತಿ

ದೀಪ್ತಿ

ಛಿನ್ನೋಽಪಿ ಚಂದನತರುರ್ನ ಜಹಾತಿ ಗಂಧಂ ವೃದ್ಧೋಽಪಿ ವಾರಣಪತಿರ್ನ ಜಹಾತಿ ಲೀಲಾಮ್ | ಯಂತ್ರಾರ್ಪಿತೋ ಮಧುರತಾಂ ನ ಜಹಾತಿ ಚೇಕ್ಷಂ ಕ್ಷೀಣೋಽಪಿ ನ ತ್ಯಜತಿ ಶೀಲಗುಣಾನ್ ಕುಲೀನಃ || “ಗಂಧದ ಮರವನ್ನು ಕಡಿದರೂ ಅದು ತನ್ನ ಸುಗಂಧವನ್ನು ಸೂಸದೆ ಇರುವುದಿಲ್ಲ. ವಯಸ್ಸು ಕಳೆದಿದ್ದರೂ ಗಜರಾಜನು ತನ್ನ ವಿಲಾಸವನ್ನು ಬಿಡುವುದಿಲ್ಲ. ಗಾಣದಲ್ಲಿ ತಿರುವಿದಾಗಲೂ ಕಬ್ಬು ತನ್ನ ಸಿಹಿ ಗುಣವನ್ನು ತ್ಯಜಿಸುವುದಿಲ್ಲ. ಅದರಂತೆ ಸಂಸ್ಕಾರವಂತನಾದವನು ಪ್ರತಿಕೂಲ ಸನ್ನಿವೇಶದಲ್ಲಿಯೂ ತನ್ನ ಉತ್ತಮ ನಡತೆಯನ್ನು ಬಿಡುವುದಿಲ್ಲ.” ಯಾವುದೊ ಅಹಿತಕರ ಸನ್ನಿವೇಶ ಎದುರಾದಾಗಲೋ ಅಥವಾ ತನ್ನ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat