ಸ್ತ್ರೀವಾದದ ಅಹಂ ಅಸ್ಮಿತೆಗಳನ್ನೆಲ್ಲ ಒಂದು ಕ್ಷಣ ಬದಿಗಿಟ್ಟು ಯೋಚಿಸೋಣ. ಹುಟ್ಟಿದ ಹಬ್ಬಕ್ಕೆಂದು ಸಂಗಾತಿ ಕೊಡಿಸುವ ತಿಳಿನೀಲಿ ಬಣ್ಣದ ಸೀರೆ, ಮದುವೆಯ ವಾರ್ಷಿಕೋತ್ಸವದ ನೆನಪಲ್ಲಿ ಅನಿರೀಕ್ಷಿತವಾಗಿ ಕೊಡಿಸಿದ ಮುದ್ದಾದ ಉಂಗುರ, ಮತ್ತೆಂದೋ ಹಾಗೇ ಸುಮ್ಮನೆ ತಂದ ಇಷ್ಟದ ಉಡುಪು… ಇವೆಲ್ಲವುಗಳ ಮೇಲೆ ಮೋಹವಿಲ್ಲದ ಹೆಣ್ಣಿದ್ದಾಳೆಯೇ? ಅವಳು ಎಷ್ಟು ಸಂಪಾದಿಸುವವಳಾಗಿರಲಿ, ಆರ್ಥಿಕ ಸ್ವಾತಂತ್ರ್ಯವಿರಲಿ, ಅವಳು ಕೊಂಡುಕೊಳ್ಳುವ ಯಾವುದೇ ವಸ್ತುವಿಗಿಂತಲೂ ಗಂಡ ಕೊಡಿಸಿದ್ದರ ಮೇಲೆ ಮೋಹ ಜಾಸ್ತಿ. ಅದೇ ಸೀರೆಯನ್ನು ಮತ್ತೆ ಮತ್ತೆ ಬೀರುವಿನಿಂದ ತೆಗೆದು ಅದರ ಮೇಲೆ ಆಪ್ಯಾಯತೆಯಿಂದ ಕೈಯಾಡಿಸುವುದರಲ್ಲೂ […]













