ಇದೀಗ ನಾವು ನಮ್ಮ ಕೆರೆಗಳನ್ನು ಉಳಿಸಲು ಏನನ್ನು ಮಾಡಬೇಕು ಎಂಬುದನ್ನು ಪುನರ್ವಿಮರ್ಶಿಸುವುದು ಅನಿವಾರ್ಯ. ಒಂದೊಮ್ಮೆ ನಮ್ಮ ಸಂಪ್ರದಾಯದ ಆಚರಣೆಗಳನ್ನು ನಾವು ಗಂಭೀರವಾಗಿ ಪರಿಗಣಿಸದಿದ್ದರೆ ಕೆರೆಗಳ ಜೊತೆಗೆ ಇನ್ನೂ ಏನನ್ನು ಕಳೆದುಕೊಳ್ಳಲು ಹೊರಟಿದ್ದೇವೆ ಎನ್ನುವುದು ಕಾಣಿಸುತ್ತದೆ… ಇಂದು ನಾವು ಆಧುನಿಕತೆ ಹೆಸರಿನಲ್ಲಿ ನಮ್ಮ ಸಾಂಪ್ರದಾಯಿಕ ಬದುಕಿನ ವ್ಯವಸ್ಥೆಗಳನ್ನು ನಿರಂತರವಾಗಿ ಅವನತಿಗೆ ದೂಡುತ್ತಿದ್ದೇವೆ. ಆಧುನಿಕತೆಯ ಹೆಸರಿನಲ್ಲಿ ಈ ಹೊಸ ವಿಚಾರಗಳು ಭಾರತೀಯರ ಜೀವನದ ಪ್ರಮುಖ ಅಂಗವಾಗಿರುವ ಆಚರಣೆಗಳ ಮೇಲೆ ಪ್ರಹಾರ ಮಾಡುತ್ತಿವೆ. ಈ ಆಚರಣೆಗಳ ಮೂಲಕವೇ ನಾವು ಕಟ್ಟಿಕೊಂಡಿದ್ದ ಬದುಕು […]













