
“ನಾನು ನನ್ನ ಸಂಗೀತದ ಅನುಭವವನ್ನು ನನ್ನ ‘ಶ್ರೀಹರಿ ಚರಿತೆ’ಯ (ಮಹಾಕಾವ್ಯ) ಮೂರು ಉಲ್ಲಾಸಗಳಲ್ಲಿ ವರ್ಣಿಸಿದ್ದೇನೆ. ಅದರಲ್ಲಿ ಬಹುಪಾಲು ದೊರೆಸ್ವಾಮಿ ಅಯ್ಯಂಗಾರ್ಯರ ವೀಣೆಯಿಂದ ನಾನು ಪಡೆದಿರುವ ಅನುಭವಗಳು. ಅವರಿಂದ ನನಗೆ ದೊರೆತಿರುವ ಆತ್ಮಾನಂದ ಅಮೋಘವಾದದ್ದು. ಅದು ನನ್ನ ಹೃದಯದ ಸಂತೋಷ ಒಣಗಿಹೋಗದಂತೆ ಕಾಪಾಡುತ್ತದೆ. ಈಗಲೂ ಅಯ್ಯಂಗಾರ್ಯರು ನಮ್ಮ ಮನೆಗೆ ಬಂದು ನನಗೆ ತುಂಬ ಸಂತೋಷವನ್ನು ಕೊಡುತ್ತಿರುತ್ತಾರೆ. ಸಂಗೀತವನ್ನು ಕುರಿತು ಅವರೊಡನೆ ಮಾತನಾಡುತ್ತಿದ್ದರೆ ನಾನು ಉಲ್ಲಸಿತನಾಗುತ್ತೇನೆ. ಕೀರ್ತನಗಳ ಸೌಂದರ್ಯವನ್ನು, ಹಾಡುಗಳಿಗೆ ಲಯದಿಂದ ಬರುವ ಚೆಲುವನ್ನು ಅವರು ಹೇಳಬೇಕು, ನಾನು ಕೇಳಬೇಕು.” […]