ಒಂದು ಕ್ಷಣ ನನ್ನಲ್ಲಿ ಭೀತಿ ಕಾಣಿಸಿಕೊಂಡಿತು. ಬಂದವನು ಭೀಮಸೇನನಿರಬಹುದೇ? ಯುಧಿಷ್ಠಿರನೆದುರು ತನ್ನ ಆಕ್ರೋಶವನ್ನು ಪೂರ್ಣ ಪ್ರಕಟಿಸಲಾರದೆ ಈಗ ಕತ್ತಲಾವರಿಸುತ್ತಿದ್ದಂತೆ ಉಳಿದವರಿಗೆ ಅರಿವಾಗದಂತೆ ಕಡೆಗೆ ಬಂದನೇ? ಅವನ ಸೇಡಿನ್ನೂ ತೀರಿಲ್ಲವೆ? ಏನು ಮಾಡುತ್ತಾನೀಗ? ನನ್ನ ಸಾವನ್ನು ಕಣ್ಣಾರೆ ನೋಡಲೆಂದು ಬಂದನೇ? ಅಥವಾ ಕೈಯಾರ ಕೊಲ್ಲುವನೆ? ಅಲ್ಲಾ ತೊಡೆಮುರಿದು ಬಿದ್ದ ನನಗೆ ಇನ್ನೂ ಚಿತ್ರಹಿಂಸೆ ಮಾಡಲೆಂದು ಬಂದನೇ? ಭೀಮ ಮಾಡಬಹುದಾದುದನ್ನು ಊಹಿಸಿಯೇ ಬೆದರಿದೆ. ಆದರೆ.. ಬರುತ್ತಿರುವವನು ಭೀಮನಿರಲಾರ ಅನಿಸಿತು. ಭೀಮನ ಕಟ್ಟುಮಸ್ತಾದ ದೇಹವಲ್ಲ ಇದು. ತೆಳುವಾದ ಕಾಯ. ಅಷ್ಟೇ ಅಲ್ಲ, […]












