ಇದೀಗ ನಾಡೆಲ್ಲ ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಅವರ ೧೨೫ನೇ ಜನ್ಮವರ್ಷವನ್ನು ಆಚರಿಸುತ್ತಿದೆ. ಈ ಉತ್ಸವಾಚರಣೆ ನಡೆದಿರುವಾಗಲೇ ಸಭ್ಯಸಮಾಜವನ್ನು ತಲೆತಗ್ಗಿಸುವಂತೆ ಮಾಡುವ ಹಗರಣಗಳು ಬಯಲುಗೊಳ್ಳುತ್ತಿವೆ. ನಮ್ಮಲ್ಲಿ ಕಾನೂನುಗಳ ಕೊರತೆಯಿದೆಯೆಂದು ಯಾರೂ ಹೇಳುವಂತಿಲ್ಲ. ೧೯೪೮ರ ನವೆಂಬರ್ ತಿಂಗಳಲ್ಲಿ ಸಂವಿಧಾನದ ಕರಡನ್ನು ಸಂವಿಧಾನಸಭೆಯಲ್ಲಿ ಮಂಡಿಸುವಾಗ ಡಾ|| ಅಂಬೇಡ್ಕರ್ ಹೇಳಿದ್ದರು: “ಸಂವಿಧಾನ ಜಾರಿಯಾದ ಮೇಲೆ ದೇಶದಲ್ಲಿ ಏನಾದರೂ ಬಿಕ್ಕಟ್ಟುಗಳುಂಟಾದರೆ ಅದು ಸಂವಿಧಾನದ ದೋಷವಾಗದು, ಮನುಷ್ಯನ ಸಂಕುಚಿತಪ್ರವೃತ್ತಿಯ ಪರಿಣಾಮವಷ್ಷೆ” ಸಂವಿಧಾನವು ಸಂಸತ್ತಿನಲ್ಲಿ ಅಂತಿಮವಾಗಿ ಅಂಗೀಕಾರ ಪಡೆಯುವುದಕ್ಕೆ ಮೊದಲು ಮಾಡಿದ ಭಾಷಣದ ಅವರ ಹೇಳಿಕೆಯಂತೂ ಅವಿಸ್ಮರಣೀಯವಾಗಿದೆ: […]
ಅಂದು-ಇಂದು
Month : June-2016 Episode : Author : ಎಸ್.ಆರ್. ರಾಮಸ್ವಾಮಿ