ಕಳೆದ (೨೦೨೩) ವರ್ಷಾಂತ್ಯ ಅಕ್ಟೋಬರಿನಲ್ಲಿ ಹಾಮಾಸಿನ ಭಯೋತ್ಪಾದಕತೆಯನ್ನು ಖಂಡಿಸುವ ಮತ್ತು ಇಸ್ರೇಲ್ ದೇಶದ ಸ್ವಾಯತ್ತತೆಯನ್ನು ಎತ್ತಿಹಿಡಿಯುವ ಒಂದು ಠರಾವನ್ನು ಅಮೆರಿಕ ಮಂಡಿಸಿತು. ಆದರೆ ಭದ್ರತಾ ಸಮಿತಿಯ ಅನ್ಯ ಸದಸ್ಯರುಗಳಾದ ರಷ್ಯಾ ಮತ್ತು ಚೀಣಾ (ಪರ್ಯಾಯ ಸದಸ್ಯ ಯು.ಎ.ಇ. ಕೂಡಾ) ಆ ನಿರ್ಣಯವನ್ನು ನಿರಾಕರಿಸಿದವು. ಇನ್ನು ಯುಕ್ರೇನ್ ಕುರಿತ ನಿರ್ಣಯವನ್ನು ರಷ್ಯಾ ಬೆಂಬಲಿಸುವುದು ಅಸಾಧ್ಯದ ಮಾತಾಗಿದೆ. ಹೀಗೆ ನಾಮಮಾತ್ರಕ್ಕೆ ವೈಶ್ವಿಕ ಸಂಸ್ಥೆಯಾದರೂ ವಾಸ್ತವದಲ್ಲಿ ಭದ್ರತಾ ಸಮಿತಿಯು ಐದು ಕಾಯಂ ಸದಸ್ಯರಾಷ್ಟ್ರಗಳ ಸ್ವಹಿತಾಸಕ್ತಿ ಪ್ರತಿಪಾದಕ ವೇದಿಕೆಯಷ್ಟೆ ಆಗಿದೆಯೆಂಬುದನ್ನು ಅಲ್ಲಗಳೆಯಲಾಗದು. ವಿವಿಧ […]
ವಿಶ್ವಸಂಸ್ಥೆ – ಈಗ ಎಷ್ಟು ಸಂಗತ?
Month : April-2024 Episode : Author : -ಎಸ್.ಆರ್.ಆರ್.