ಸಮಾಜದ ಭಯಕ್ಕೋ, ಪೋಷಕರ ಒತ್ತಡಕ್ಕೋ ‘ಈಗ ನಾವು ಚೆನ್ನಾಗಿದ್ದೇವೆ’ ಎಂಬAತೆ ಬಿಂಬಿಸಿದರೂ ಅದು ಕೇವಲ ಮುಖವಾಡ ಮಾತ್ರವೇ ಆಗಿರುತ್ತದೆ. ಯಾಕೆಂದರೆ ಓರ್ವ ವ್ಯಕ್ತಿ ಯಾರನ್ನಾದರೂ ಒಮ್ಮೆ ನೋಯಿಸಿದ್ದಲ್ಲಿ ಅದು ಅವರ ಮನದಲ್ಲಿ ಸದಾ ಉಳಿದೇ ಇರುತ್ತದೆ, ಮುಖದ ಮೇಲೆ ಅದೆಷ್ಟು ನಗುವಿದ್ದರೂ. ಹರಿದ ಬಟ್ಟೆಯನ್ನು ಮತ್ತೆ ಒಂದಾಗಿಸಿ ಹೊಲಿದಲ್ಲಿ ಸೂಜಿಯ, ನೂಲಿನ ಗುರುತಿದ್ದಂತೆ ಮನದೊಳಗೂ ಅಂಥದ್ದೊಂದು ತೇಪೆ ಉಳಿದುಕೊಂಡಿರುತ್ತದೆ. ಅಷ್ಟಕ್ಕೂ ಪ್ರತಿಯೊಬ್ಬರೂ ತನ್ನ ಬದುಕಿನಲ್ಲಿ ಬಯಸುವುದೇನನ್ನು? ಇಡಿಯ ಜಗತ್ತಿನಲ್ಲಿ ನಮ್ಮನ್ನು ಅತ್ಯಂತ ನೋಯಿಸುವುದು ನಾವು ಅತಿಹೆಚ್ಚು ಪ್ರೀತಿಸುವವರಂತೆ! […]













