“ಎಷ್ಟುಕಾಲ? ಮಗೂ, ಅದನ್ನು ನಿರ್ಣಯಿಸಬೇಕಾದವನು ನೀನೆ. ನಿನ್ನ ತಪಸ್ಸು ಕಠಿಣವಾದಷ್ಟು ಸಿದ್ಧಿ ಶೀಘ್ರವಾಗುತ್ತದೆ. ಸಾವಿರ ವರ್ಷ ಅಂದರೆ ಒಂದು ಸಾವಿರವೆಂದಲ್ಲ. ಸುದೀರ್ಘಾವಧಿ ಎಂದರ್ಥ. ಸಿದ್ಧಿಸುವವರೆಗೆ ತಪಸ್ಸು ಮಾಡು” ಎಂದು ಪರಮೇಶ್ವರ ಅಂತರ್ಧಾನನಾದ. ಕಠಿಣ ತಪಸ್ಸು ಎಂದನಲ್ಲವೇ ಶಿವ? ನಿರಂತರ ಹೊಗೆಯುಕ್ಕುವಂತೆ ಕೆಂಡಗಳನ್ನು ಹರವಿ ಅದರ ಮೇಲಿನ ಮರದ ಕೊಂಬೆಗೆ ತಲೆಕೆಳಗಾಗಿ ಜೋತುಬಿದ್ದು ತಪಸ್ಸಿಗೆ ತೊಡಗಿದೆ. ದೈಹಿಕವಾಗಿ ಮಹಾಯಾತನೆಯನ್ನು ಅನುಭವಿಸುತ್ತ ಎಷ್ಟೋ ಕಾಲ ಕಳೆದಿರಬೇಕು. ಕೊನೆಗೊಮ್ಮೆ ಮೃತಸಂಜೀವಿನಿ ಸಿದ್ಧಿಯಾಗುವ ಮುಹೂರ್ತ ಒದಗಿತು. ನನ್ನೆದುರು ಮತ್ತೊಮ್ಮೆ ಪರಶಿವ ಕಾಣಿಸಿಕೊಂಡ. ಈ […]












