ಭೀರುಃ ಪಲಾಯಮಾನೋsಪಿ ನಾವೇಷ್ಟವ್ಯೋ ಬಲೀಯಸಾ| ಕದಾಚಿಚ್ಛೂರತಾಮೇತಿ ಮರಣೇ ಕೃತನಿಶ್ಚಯಃ || – ಸುಭಾಷಿತಸುಧಾನಿಧಿ “ಪುಕ್ಕಲನು ಹೆದರಿ ಓಡಿಹೋಗುತ್ತಿದ್ದಾಗಲೂ ಅವನನ್ನು ಅವನ ಪಾಡಿಗೆ ಬಲಿಷ್ಠನು ಬೆನ್ನುಹತ್ತದೆ ಬಿಡಬೇಕು. ಏಕೆಂದರೆ ಒಮ್ಮೊಮ್ಮೆ ತಾನು ಸಾಯುವುದು ನಿಶ್ಚಿತವೆನಿಸಿದಾಗ ಅಂತಹವನಲ್ಲಿ ಹಿಂದೆ ಇರದಿದ್ದ ಅಪಾರ ಶೌರ್ಯದ ಸಂಚಯವಾಗಿರುತ್ತದೆ.” ಸುಪ್ತವಾಗಿದ್ದ ಶಕ್ತಿಯೆಲ್ಲ ಪ್ರಾಣಾಂತಕ ಸನ್ನಿವೇಶ ಎದುರಾದಾಗ ಒಗ್ಗೂಡಿ ಬರುತ್ತದೆ. ಜಿಂಕೆಯನ್ನು ಹುಲಿ ಬೆನ್ನುಹತ್ತಿದಾಗ ಜಿಂಕೆ ತಾನು ಸಾಮಾನ್ಯವಾಗಿ ಓಡುತ್ತಿದ್ದುದರ ನಾಲ್ಕುಪಟ್ಟು ವೇಗದಿಂದ ಓಡುತ್ತದೆ. ಹುಲಿಗೆ ಅದು ಒಪ್ಪತ್ತಿನ ಡಿನ್ನರ್ ಮಾತ್ರ; ಜಿಂಕೆಗೆ ಅದು ಬದುಕು-ಸಾವಿನ ಪ್ರಶ್ನೆ. ಅನ್ಯೋಕ್ತಿ ಪ್ರಕಾರದ […]
ದೀಪ್ತಿ
Month : August-2018 Episode : Author : ಎಸ್.ಆರ್. ರಾಮಸ್ವಾಮಿ