
ಪ್ರಬುದ್ಧತೆಯ ಕಡೆಗಿನ ಒಂದು ನಡೆಯೆಂದರೆ ಭಿನ್ನತೆಯನ್ನು ಗೌರವಿಸುವುದು. ಎಲ್ಲರೂ ಒಂದೇ ಥರ ಇರುವುದು ಸಾಧ್ಯವಿಲ್ಲ ಎಂಬುದು ಹೇಗೋ ಹಾಗೆಯೇ ಒಂದು ಮೌಲ್ಯವನ್ನು ಎಲ್ಲರೂ ಒಪ್ಪಿಕೊಳ್ಳಬೇಕೆಂದೇನೂ ಇಲ್ಲ. ಅವರವರ ನಿಲವು ಅವರವರದ್ದು. ವ್ಯಕ್ತಿಗತವಾಗಿ ಭಿನ್ನತೆ ಇದ್ದೇ ಇರುತ್ತದೆ. ಮನೆಯೊಳಗಿನ ಸಣ್ಣ ಉದಾಹರಣೆ ಕೊಡಬಹುದಾದರೆ ಒಬ್ಬರಿಗೆ ಚಹಾ ಇಷ್ಟವಾಗುತ್ತದೆ, ಮತ್ತೊಬ್ಬರಿಗೆ ಕಾಫಿ ಇಷ್ಟವಾಗುತ್ತದೆ. ತಿಂಡಿಯಲ್ಲಿಯೂ ಒಬ್ಬರಿನ್ನೊಬ್ಬರ ಆದ್ಯತೆಗಳು ಭಿನ್ನವೇ ಇರುತ್ತವೆ. ಆದರೆ ಪರಸ್ಪರರ ಇಷ್ಟಗಳನ್ನು ಗೌರವಿಸುವುದನ್ನು ಕಲಿತರೆ ಅಲ್ಲಿ ಸುಂದರ ಸಮನ್ವಯತೆ ಸಾಧಿತವಾಗುತ್ತದೆ. ಎಳೆತನದ ದಿನಗಳಲ್ಲಿ ಅಪ್ಪ ತಂದುಕೊಡುತ್ತಿದ್ದ ಚಾಕ್ಲೇಟು, […]