![ಮಕ್ಕಳೊಡನಾಟವಿರಲಿ ಮನೆಗೆಲಸದೊಳಗೆ!](https://utthana.in/wp-content/uploads/2021/10/9_Utthana-September-2021-34-150x150.jpg)
ಎಂದಿನಂತೆಯೇ ಒಂದು ಒತ್ತಡದ ದಿನ. ಬೆಳಗ್ಗೆ ಐದೂವರೆಯಿಂದ ಶುರುವಾದ ನನ್ನ ಕೆಲಸದ ಓಟ ಮಧ್ಯಾಹ್ನ ಎರಡು ಗಂಟೆಗೆ ಊಟವಾಗುವಲ್ಲಿಯವರೆಗೂ ಮುಂದುವರಿದೇ ಇತ್ತು. ಸರಿ, ಬಳಿಯಲ್ಲಿದ್ದ ಮಕ್ಕಳಲ್ಲಿ ಅವಲತ್ತುಕೊಂಡೆ, ‘ತುಂಬಾ ಸುಸ್ತಾಗಿದೆ ನನಗೆ. ನೀವಿನ್ನು ಟಿವಿ ಮೊಬೈಲು ಅಂತ ನೋಡಬೇಕಾದರೆ ಮೊದಲು ತೊಳೆದಿಟ್ಟ ಪಾತ್ರೆಗಳನ್ನೆಲ್ಲಾ ಅಚ್ಚುಕಟ್ಟಾಗಿ ಒರೆಸಿ ಅವುಗಳ ಸ್ಥಾನದಲ್ಲಿ ಚೆನ್ನಾಗಿ ಜೋಡಿಸಬೇಕು. ಬೆಳಗ್ಗಿನಿಂದ ಕುಳಿತೇ ಇಲ್ಲ ನಾನು.’ ಏನೋ ನನ್ನ ಪರಿಸ್ಥಿತಿ ಅರ್ಥ ಮಾಡಿಕೊಂಡಂತೆ ಮಕ್ಕಳು ‘ನಾವು ಪಾತ್ರೆಗಳನ್ನು ಜೋಡಿಸಿಯೇ ಸಿದ್ಧ’ಎಂದು ಸಾಕ್ಷಾತ್ ಸಾಗರೋಲ್ಲಂಘನೆಗೆ ಸನ್ನದ್ಧನಾದ ಆಂಜನೇಯನAತೆ […]