
ಒಮ್ಮೆ ರವೀಂದ್ರನಾಥ ಟಾಗೋರರು ಜಪಾನಿಗೆ ಹೋಗಿದ್ದರು. ಜಪಾನಿನಂತಹ ಪುಟ್ಟ ದೇಶ ಅಷ್ಟೊಂದು ಮುಂದುವರಿಯಲು ಕಾರಣವೇನು ಎಂದು ತಿಳಿಯುವ ಕುತೂಹಲ ಟಾಗೋರರಿಗಿತ್ತು. ಆದ್ದರಿಂದ ಅವರ ಕಾರ್ಯಕ್ರಮದ ವ್ಯವಸ್ಥಾಪಕರ ಹತ್ತಿರ ಅವರೊಂದು ಮನವಿ ಮಾಡಿದರು. ಅದೇನೆಂದರೆ ‘ನಾನು ನಿಮ್ಮ ದೇಶದ ಒಂದು ಸಣ್ಣ ಗ್ರಾಮದ ಒಂದು ಪ್ರಾಥಮಿಕ ಶಾಲೆಯನ್ನು ನೋಡಬೇಕು’ ಎಂಬುದಾಗಿ. ಅವರ ಇಚ್ಛೆಯ ಪ್ರಕಾರ ಅವರನ್ನು ಜಪಾನಿನ ಒಂದು ಸಣ್ಣ ಹಳ್ಳಿಯ ಪ್ರಾಥಮಿಕ ಶಾಲೆಗೆ ಕರೆದುಕೊಂಡು ಹೋದರು. ಟಾಗೋರರು ಆ ಶಾಲೆಯ ಒಂದು ತರಗತಿಯ ಕೊನೆಯ ಬೆಂಚಿನಲ್ಲಿ ಕುಳಿತ […]