ಒಬ್ಬ ಭಕ್ತನ ಹೊರತು ಉಳಿದವರಿಗೆ ಅಹಂಕಾರವೆಂಬ ಭೂತದ ಸಂಚಾರವಾದ್ದರಿಂದ, ಅವರಿಗೆ ಆತ್ಮಬೋಧೆಯ ವಿಸ್ಮೃತಿಯುಂಟಾಯಿತು. ಆಗ ಅವರಿಗೆ ನಿಯಮರೂಪ ವಸ್ತ್ರದ ಪರಿವೆ ಉಳಿಯುವುದಿಲ್ಲ. ಮುಂದೆ ಒದಗುವ ಅಧೋಗತಿಯ ಬಗ್ಗೆ ಲಜ್ಜೆಯೆನಿಸುವುದಿಲ್ಲ. ಇಷ್ಟೇ ಅಲ್ಲ, ವೇದವು ನಿಷೇಧಿಸಿದ ಸಂಗತಿಗಳನ್ನು ಅವರು ಆಚರಿಸುವರು. ಅರ್ಜುನ! ನೋಡು. ಅವರು ಈ ಶರೀರವೆಂಬ ಊರಿಗೆ ಯಾವ ಕೆಲಸಗಳನ್ನು ನಿರ್ವಹಿಸಲು ಬಂದಿರುವರೋ ಅವೆಲ್ಲವನ್ನು ಬದಿಗಿರಿಸಿ, ಇಂದ್ರಿಯಗಳೆಂಬ ಗ್ರಾಮದ ರಾಜಮಾರ್ಗದ ಮೇಲೆ ಕಾಮ ಕ್ರೋಧ ಮುಂತಾದ ಹಲವಾರು ವಿಕಾರಗಳ ಸಮುದಾಯಗಳನ್ನು ಗುಂಪುಗೂಡಿಸಿ ನಾನು ಮತ್ತು ನನ್ನದು ಎಂದು […]
ಭಕ್ತ ಮತ್ತು ಜ್ಞಾನಿ
Month : October-2024 Episode : Author : ಸಂತ ಜ್ಞಾನೇಶ್ವರ ಮಹಾರಾಜರು