
ಶಿವರಾಮ ಕಾರಂತರ ಕಾದಂಬರಿಗಳಲ್ಲಿ ವೃದ್ಧೆಯರಿಗೆ ವಿಶೇ಼ಷವಾದ ಒಂದು ಸ್ಥಾನವಿದೆ; ಮಾಗಿದ ಅನುಭವದ ಪ್ರತಿರೂಪಗಳಾಗಿ ಅವರು ಅಲ್ಲಿ ಬರುತ್ತಾರೆ. ದೇವನೂರು ಮಹಾದೇವ ಅವರ ಪ್ರಮುಖ ಕೃತಿ (ಕಾದಂಬರಿ) ’ಕುಸುಮಬಾಲೆ’ಯಲ್ಲಿ ಬರುವ ಜೋಗತಿಯರದ್ದು ಕೂಡ ಮಹತ್ತ್ವದ ಸ್ಥಾನವಾಗಿದೆ. ಇವು ಅಕಸ್ಮಿಕಗಳಲ್ಲ. ನಮ್ಮ ಜೀವನದಲ್ಲಿ, ಅದರ ಏಳು-ಬೀಳುಗಳಲ್ಲಿ ಮತ್ತು ಅದೇ ರೀತಿ ಒಂದು ತಲೆಮಾರಿನ ಜ್ಞಾನವನ್ನು ಸಂಗ್ರಹಿಸಿ, ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದರಲ್ಲಿ ಮುದುಕಿಯರದ್ದು ಪ್ರಮುಖ ಪಾತ್ರವಾಗಿರುತ್ತದೆ. ಅವಳು ಸೊಸೆಯೊಂದಿಗೆ ಜಗಳಾಡಬಹುದು (ಅತ್ತೆ- ಸೊಸೆ ಜಗಳ ಸಾರ್ವತ್ರಿಕ ಇರಲೂಬಹುದು). ಆದರೆ ಆಕೆ ಮಗನನ್ನು […]