ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಸಂಪಾದಕೀಯ

ಸಂಪಾದಕೀಯ

ಇದು ಅಧೋಬಿಂದು

ಈಗ್ಗೆ ಕೆಲವೇ ದಿನಗಳ ಹಿಂದೆ ನಡೆದ ಒಂದು ಮಾರ್ಮಿಕ ಘಟನೆ. ಬೇಲ್‌ಪುರಿ-ಚಾಟ್ಸ್ ಅಂಗಡಿಗೆ ಬಂದಿದ್ದ ಗಿರಾಕಿಯೊಬ್ಬ ಬೇಲ್‌ಪುರಿಯನ್ನು ಬೇಗ ಮಾಡಿಕೊಡುವಂತೆ ಅಂಗಡಿಯವನನ್ನು ಅವಸರಿಸಿದ.

ಮುಗಿಯದ ದುಷ್ಪ್ರಚಾರ

ಎಷ್ಟೇ ಬದಲಾದಂತೆ ಕಂಡರೂ ವಾಸ್ತವವಾಗಿ ಯಾವುದರ ಸ್ವರೂಪವೂ ಬದಲಾಗುವುದಿಲ್ಲ – ಎಂಬುದು ಫ್ರೆಂಚ್ ಭಾಷೆಯ ಪ್ರಸಿದ್ಧ ನಾಣ್ಣುಡಿ. ಭಾರತವು ಹಾವಾಡಿಗರ ದೇಶ, ಅಲ್ಲಿ ಹುಟ್ಟಿದ ಹೆಣ್ಣುಮಕ್ಕಳನ್ನು ನದಿಯಲ್ಲಿ ಬಿಸಾಡುತ್ತಾರೆ – ಎಂದೆಲ್ಲ ಹದಿನೆಂಟು-ಹತ್ತೊಂಬತ್ತನೇ ಶತಮಾನಗಳಲ್ಲಿ ಬ್ರಿಟಿಷರು ಪ್ರಚಾರಮಾಡುತ್ತಿದ್ದರು.

ಈ ದುರ್ಘಟನೆ ಆಗಬಾರದಿತ್ತು

ಒಬ್ಬ ವ್ಯಕ್ತಿಯ ಅಕಾಲಿಕ ಮರಣ ಇಡೀ ರಾಜ್ಯವನ್ನೇ ಕ್ಷುಬ್ಧಗೊಳಿಸುವುದು ವಿರಳ. ಐ.ಎ.ಎಸ್. ಅಧಿಕಾರಿ ಡಿ.ಕೆ. ರವಿ ಅವರ ಅಸಹಜ ಸಾವು ಎಷ್ಟು ವ್ಯಾಪಕ ಸಂಚಲನವನ್ನು ಸೃಷ್ಟಿಸಿದೆಯೆಂಬುದು ಈ ದಿನಗಳಲ್ಲಿ ಪ್ರಾಮಾಣಿಕತೆಯೂ ದಕ್ಷತೆಯೂ ಆಡಳಿತಯಂತ್ರದಲ್ಲಿ ಎಷ್ಟು ವಿರಳವಾಗಿವೆಯೆಂಬುದನ್ನು ಎತ್ತಿತೋರಿಸಿದೆ.ಪ್ರಚಲಿತ ಪರಿಸರದ ಕಾರಣದಿಂದಾಗಿ ಹೆಚ್ಚು ಸಮಯ ಜಡರಾಗಿರುವಂತೆ ತೋರುವ ಜನತೆಯು ಆಡಳಿತಶಾಹಿಯಲ್ಲಿ ಪ್ರಾಮಾಣಿಕತೆಯೂ ಜನಾಭಿಮುಖವರ್ತನೆಯೂ ಕಂಡಾಗ ಎಷ್ಟು ಪ್ರಖರವಾಗಿ ಹೃದಯದಾಳದಿಂದ ಸ್ಪಂದಿಸುತ್ತಾರೆಂಬುದನ್ನು ಈ ಪ್ರಕರಣ ನಿದರ್ಶನಪಡಿಸಿದೆ. ರವಿ ಅವರ ದಿಟ್ಟತನವೂ ನಿರ್ಭೀತಿಯೂ ಜನಹಿತಚಿಂತನೆಯೂ ಪ್ರಕಾಶಗೊಂಡಿದ್ದ ಕೋಲಾರ ಜಿಲ್ಲೆ ಮಾತ್ರವಲ್ಲದೆ ದೂರದ […]

ಮುಗಿಲಿನತ್ತ ಉಗುಳು

ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿದ್ದಾಗ ಒಬ್ಬ ಕ್ರೈಸ್ತಪಾದರಿಯ ಮನೆಗೆ ಅಭ್ಯಾಗತರಾಗಿ ಹೋಗಿದ್ದರು. ಆತ ಒಂದು ಮೇಜಿನ ಮೇಲೆ ಬೈಬಲ್ ಮೊದಲಾದ ಗ್ರಂಥಗಳನ್ನು ಪೇರಿಸಿ ಅವೆಲ್ಲದರ ಕೆಳಗೆ ಭಗವದ್ಗೀತೆಯನ್ನು ಇಟ್ಟಿದ್ದ. ಅದರ ಕಡೆಗೆ ಅವಹೇಳನಕರವಾಗಿ ಬೊಟ್ಟುಮಾಡಿ ಆತ ಹೇಳಿದ: “ನೋಡಿ, ನಿಮ್ಮ ಭಗವದ್ಗೀತೆ ಎಲ್ಲಕ್ಕಿಂತ ಕೆಳಗಿನ ಸ್ಥಾನದಲ್ಲಿದೆ.” ಸ್ವಾಮಿಜೀ ಕ್ಷಣಮಾತ್ರವೂ ತಡವರಿಸದೆ ಬಾಣದಂತೆ ಉತ್ತರಿಸಿದರು: “ನಿಮ್ಮ ಮಾತನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಭಗವದ್ಗೀತೆಯು ಎಲ್ಲಕ್ಕಿಂತ ಕೆಳಗೆ ಸ್ಥಿರವಾಗಿ ಇರುವುದರಿಂದಲೇ ಉಳಿದೆಲ್ಲ ಗ್ರಂಥಗಳೂ ಹೀಗೆ ನಿಲ್ಲುವುದು ಸಾಧ್ಯವಾಗಿದೆ.”

“ಇವೆಂಟ್” ಆಯಿತು; ಉಪಲಬ್ಧಿ ಅಷ್ಟಕಷ್ಟೆ

ಗಣರಾಜ್ಯ ದಿನಾಚರಣೆಯೊಡಗೂಡಿ ನಡೆದ ಅಮೆರಿಕಾಧ್ಯಕ್ಷ ಬರಾಕ್ ಒಬಾಮಾ ಭೇಟಿಯನ್ನು ಒಂದು ಗಣನೀಯ `ಇವೆಂಟ್’ ಎಂದು ಮಾಧ್ಯಮಗಳು ಬಿಂಬಿಸಿದುದು ಸಹಜವೇ. ನೈಮಿತ್ತಿಕ ಪ್ರವಾಸಸರಣಿಯ ಭಾಗವೆಂದಲ್ಲದೆ ಅವರು ಪ್ರತ್ಯೇಕವಾಗಿ ಭಾರತಕ್ಕೇ ಭೇಟಿ ನೀಡಿದುದು – ಇಂತಹ ಒಂದೆರಡು ವಿಶಿಷ್ಟತೆಗಳೂ ಇದ್ದವು. ಈ ಭೇಟಿಯನ್ನು ಅಮೆರಿಕ ಸರ್ಕಾರ, ಭಾರತ ಸರ್ಕಾರ ಎರಡೂ `ಐತಿಹಾಸಿಕ’ವೆಂದು ವರ್ಣಿಸಿದುದು ಸ್ವಾಭಾವಿಕ.

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ