
ಭಾರತದಲ್ಲಿ ಈಸ್ಟ್ ಇಂಡಿಯ ಕಂಪೆನಿ ಅವ್ಯವಹಾರಗಳು ಎಷ್ಟು ಅಸಹನೀಯ ಮಟ್ಟ ತಲಪಿದ್ದವೆಂದರೆ ಬ್ರಿಟಿಷ್ ಸರ್ಕಾರಕ್ಕೇ ಇರುಸುಮುರುಸಾಗತೊಡಗಿತ್ತು. ಆ ಸ್ಥಿತಿಯಲ್ಲಿ ಬ್ರಿಟಿಷರು ತಮ್ಮ ಸಾಮ್ರಾಜ್ಯವಿಸ್ತರಣೆಯನ್ನು ಒಂದಷ್ಟಾದರೂ ಸಮರ್ಥಿಸಿಕೊಳ್ಳುವುದಕ್ಕಾಗಿ ಹುಟ್ಟುಹಾಕಿದ್ದು ‘ವ್ಹೈಟ್ ಮ್ಯಾನ್ಸ್ ಬರ್ಡನ್’ ಜಾಡಿನ ವಾದಸರಣಿ. ಈ ಸುಳ್ಳಿನ ಕಂತೆಗಳನ್ನು ನಮ್ಮವರೂ ನಂಬಿದರೆಂಬುದು ಆಶ್ಚರ್ಯಕರ. ಚರಿತ್ರೆಯನ್ನು ಅಲಕ್ಷಿಸಿದವರು ಆ ಹಿಂದಿನ ಕರಾಳ ಯುಗಗಳಲ್ಲಾಗಿದ್ದಂತಹ ಅಮಾನುಷತೆಗೂ ಬವಣೆಗಳಿಗೂ ಮತ್ತೆ ತುತ್ತಾಗಬೇಕಾಗುತ್ತದೆ – ಎಂಬುದೊಂದು ಪ್ರಸಿದ್ಧ ಹೇಳಿಕೆ. ಈ ವಿಶ್ಲೇಷಣೆಯ ತಥ್ಯತೆಯಲ್ಲದೆ ಬಗಿದಷ್ಟೂ ಹೆಚ್ಚುಹೆಚ್ಚು ಸೂಕ್ಷ್ಮವಿವರಗಳು ಹೊರಬರುತ್ತಿರುತ್ತವೆ ಎಂಬ ವಾಸ್ತವವೂ ಇದೆ. […]