
ನೆನಪುಗಳ ಕೊಳಕ್ಕೆ ಕಲ್ಲು ಹಾಕಿದಾಗ ಹುಟ್ಟಿದ ಅಲೆಗಳು ರೇಖಾಳ ಸಹಿಷ್ಣುತೆಯ ಮಟ್ಟವನ್ನು ಮೀರಿ ಅವಳನ್ನು ದುರ್ಬಲವಾಗಿಸತೊಡಗಿದವು. ಕಾಲೇಜ್ ಕ್ಯಾಂಟೀನಿನಲ್ಲಿ ಎಲ್ಲರೆದುರೇ “ನಿಂಗೆ ನನ್ನನ್ನ ಕಂಡ್ರೆ ಇಷ್ಟಾನಾ ಇಲ್ವಾ ಅಂತ ಕ್ಲಿಯರ್ ಆಗಿ ಹೇಳ್ಬಿಡು” ಎಂದು ವಿಕಾಸ ಪ್ರೇಮನಿವೇದನೆ ಮಾಡಿದ್ದು, ಅಪ್ಪ-ಅಮ್ಮ ಇಲ್ಲದೋಳು ಎಂದು ತನ್ನ ತಂದೆತಾಯಿ ಕಡೆಗಣಿಸಿದಾಗ ಅವರ ಜೊತೆಗೇ ಮಾತುಬಿಟ್ಟು ಹಠ ಹಿಡಿದು ನನ್ನನ್ನು ಮದುವೆ ಮಾಡಿಕೊಂಡಿದ್ದು, ಅವನಿಗೆ ಇಷ್ಟವಿಲ್ಲದಿದ್ದರೂ ಈ ಅಪಾರ್ಟ್ಮೆಂಟಿಗೆ ನನ್ನೊಂದಿಗೆ ಬಂದಿದ್ದು – ಎಲ್ಲವನ್ನೂ ಒಂದೊಂದಾಗಿ ವಿವರವಾಗಿ ಟೈಪಿಸುತ್ತಾ ಹೋದಂತೆ ಅವಳಿಗೆ […]