ಹೃದಯಂ ಸದಯಂ ಯಸ್ಯ ಭಾಷಿತಂ ಸತ್ಯಭೂಷಿತಮ್| ಕಾಯಃ ಪರಹಿತೋಪಾಯಃ ಕಲಿಃ ಕುರ್ವೀತ ತಸ್ಯ ಕಿಮ್|| “ಯಾರ ಹೃದಯದಲ್ಲಿ ದಯೆಯು ತುಂಬಿಕೊಂಡಿದೆಯೋ, ಯಾರ ಮಾತು ಎಂದೂ ಸತ್ಯದಿಂದ ದೂರ ಸರಿಯದೋ, ಯಾರ ಶರೀರವು ಸದಾ ಇತರರ ಹಿತಕ್ಕಾಗಿ ಮೀಸಲಿರುತ್ತದೆಯೋ, ಅಂಥವನನ್ನು ಕಲಿಪುರುಷನು ಹೇಗೆ ತಾನೆ ಬಾಧಿಸಿಯಾನು?” ಯಾರ ಅಂತರಂಗದಲ್ಲಿ ಉದಾರತೆಯೂ ಉದಾತ್ತತೆಯೂ ಪರಹಿತಕಾರಕ ಪ್ರವೃತ್ತಿಯೂ ಸಹಜವಾಗಿ ಮನೆಮಾಡಿಕೊಂಡಿರುತ್ತವೆಯೋ ಅಂಥವನು ಎಂದೂ ಪಾಪವನ್ನೆಸಗಲಾರನಾದುದರಿಂದ ಅವನನ್ನು ಬಾಧಿಸುವ ಅವಕಾಶ ಕಲಿಪುರುಷನಿಗೆ ದೊರೆಯುವುದೇ ಇಲ್ಲ. ಅಂಥವನಿಗೆ ಸದ್ಗತಿ ನಿಶ್ಚಿತ. ಒಂದು ಸತ್ಯಕಥೆ ಇದು. […]
ದೀಪ್ತಿ
Month : September-2020 Episode : Author :




