
-ಆರತಿ ಪಟ್ರಮೆ ಹೊಸದಾಗಿ ಕಟ್ಟಿಸಿದಾಗ ಮನೆ ಹೇಗಿದ್ದಿತೋ ಹಾಗೆಯೇ ವರುಷಗಳು ಉರುಳಿದಂತೆ ಇರುವುದಕ್ಕೆ ಸಾಧ್ಯವಿಲ್ಲ, ನಿಜ. ಹಾಗೆಂದು ನಮಗೆ ನಾವೇ ಅಭ್ಯಾಸ ಮಾಡಿಕೊಂಡ ಕೆಲವು ಕ್ರಮಗಳಿಂದ ನಾವೇ ಕಳಚಿಕೊಳ್ಳುವುದೂ ಸಾಧ್ಯವಾಗುವುದಿಲ್ಲ. ಕೆಲವು ಕಡೆ ಅತೀವ ಕಾಳಜಿ, ಇನ್ನು ಕೆಲವೆಡೆ ತೀವ್ರ ನಿರ್ಲಕ್ಷ್ಯ. ಎಲ್ಲರೂ ಎಲ್ಲದರಲ್ಲೂ ಪರಿಪೂರ್ಣವಾಗಿರುವುದು ಸಾಧ್ಯವೇ? ಥೋ… ಅಡುಗೆಮನೆ ಪೂರ್ತಿ ಸ್ವಚ್ಛವಿಲ್ಲದೆ ಹೋದರೆ ಬೆಳಗ್ಗೆ ಅಡುಗೆಮನೆಗೆ ಬರುವುದಕ್ಕೇ ಮನಸ್ಸಾಗುವುದಿಲ್ಲ ಎಂಬುದು ನನ್ನ ಪ್ರತಿನಿತ್ಯದ ಉವಾಚ. ಇದು ಮಕ್ಕಳಿಗೂ ಎಷ್ಟು ಅಭ್ಯಾಸವಾಗಿದೆಯೆಂದರೆ ಮಕ್ಕಳಲ್ಲಿ ತೊಳೆದ ಪಾತ್ರೆಗಳನ್ನು ಒರೆಸಿ […]