ಬೆಳಗ್ಗೆ ಎದ್ದ ಕೂಡಲೆ ಹತ್ತಾರು ಸೀನುವುದು ನನಗೆ ನನ್ನ ಅಮ್ಮನಿಂದಲೇ ನೇರವಾಗಿ ಬಂದ ಬಳುವಳಿ. ಅಮ್ಮನ ಆಕ್ಷಿಗೆ ಹತ್ತು ಹಲವು ರಾಗಗಳಿದ್ದಂತೆ ಕೆಲವೊಮ್ಮೆ ನನಗೂ ಕೀರಿದ ಹಾಗೋ ಕಿರುಚಿದ ಹಾಗೋ ಸೀನು ಬರುವುದಿದೆ. ಯಾವಾಗಲೂ ನಾನು ಸೀನು ಶುರುವಿಟ್ಟ ಕೂಡಲೇ ‘ಅಯ್ಯೋ ಅಮ್ಮಾ.. ನೀನು ನಿಜವಾಗಿಯೂ ಸೀನುವುದಾ ಅಲ್ಲಾ ಬರಿಸಿಕೊಳ್ಳುವುದಾ ಅಂತ ನನಗೆ ಡೌಟು’ ಎನ್ನುವ ಮಗ ನನ್ನ ಬದಲಾಗುವ ಭಾವಭಂಗಿಗಾಗಿ ಕಾಯುತ್ತಾನೆ. ನನಗೆ ಮೂಗೇ ಹರಿದುಹೋಗುವಂತೆ ಬರುವ ಆಕ್ಷಿಗಿಂತ ಹೆಚ್ಚು ಆಪ್ಯಾಯಾನವಾಗುವುದು ಅವನ ಮುಖದಲ್ಲಿನ ಪ್ರತಿಕ್ರಿಯೆ! […]
ಕೊರೋನಾ ಸುತ್ತ ಒಂದಿಷ್ಟು !
Month : April-2020 Episode : Author : ಆರತಿ ಪಟ್ರಮೆ