
ನನ್ನಂತಹವಳಿಗೆ ಯಾವ ಊರಿನ ಅರಮನೆಯಾದರೇನು? ಜೀವನದಲ್ಲಿ ವ್ಯತ್ಯಾಸವೇನೂ ಆಗುವುದಿಲ್ಲವಷ್ಟೆ? ನನ್ನ ಬದುಕಿನಲ್ಲೂ ಬದಲಾವಣೆಯೇನೂ ಆಗಲಿಲ್ಲ. ಹಿಂದೆ ರಾಜಕುಮಾರಿಯಾಗಿದ್ದು ಈಗ ರಾಣಿಯೆನಿಸಿದ ಅಂಬಿಕೆಯ ಪರಿಚರ್ಯೆಯಲ್ಲಿ ದಿನಗಳು ಸಾಗುತ್ತಿದ್ದವು. ಹಸ್ತಿನಾವತಿಯ ಮಹಾರಾಜ ವಿಚಿತ್ರವೀರ್ಯನ ಕೈಹಿಡಿದ ಕುಮಾರಿಯರಿಬ್ಬರೂ ಸುಖವಾಗಿ ಇದ್ದರು ಎನ್ನಬಹುದು. ಮಹಾರಾಜ ಅವರ ಅಂತಃಪುರವನ್ನು ಬಿಟ್ಟು ಹೊರಗೆ ಹೋಗುತ್ತಲೇ ಇರಲಿಲ್ಲ. ಹಗಲಿರುಳು ಅಲ್ಲಿಯೇ ಇರುತ್ತಿದ್ದ. ತನ್ನ ಮಡದಿಯರ ಚೆಲುವಿಗೆ ಮರುಳಾಗಿದ್ದನೋ ಅಥವಾ ಅವನ ಸ್ವಭಾವವೇ ಹಾಗಿತ್ತೋ ಹೇಳುವುದು ಕಷ್ಟ. ನನಗೆ ಹೆಸರಿಲ್ಲ. ಹೆಸರಿಲ್ಲ ಎಂದರೆ ಹೆತ್ತವರು ಕರೆಯುವುದಕ್ಕಾದರೂ ಒಂದು ಹೆಸರಿಡಲಿಲ್ಲವೋ […]