ದೊಡ್ಡ ಪ್ರಮಾಣದಲ್ಲಿ ಸುಶಿಕ್ಷಿತರನ್ನೊಳಗೊಂಡ ನಮ್ಮ ರಾಜ್ಯದಲ್ಲಿ ಮತದಾನದ ಪ್ರಮಾಣ ಇಷ್ಟು ಕಡಮೆಯಾಗಿರುವುದು ಏಕೆಂಬುದಕ್ಕೆ ದೇವರೇ ಉತ್ತರಿಸಬೇಕು. ಸಿಲಿಕಾನ್ ಸಿಟಿ, ಉದ್ಯಾನನಗರಿ ಎಂದೆಲ್ಲ ಕರೆಯಿಸಿಕೊಳ್ಳುವ ರಾಜಧಾನಿ ಬೆಂಗಳೂರಿನಲ್ಲಿಯೆ ಮೂರೂ ಕ್ಷೇತ್ರಗಳನ್ನು ಒಟ್ಟಾಗಿ ಪರಿಶೀಲಿಸಿದಾಗ ಮತದಾನವಾಗಿರುವುದು ಸರಾಸರಿ ಶೇ. 52.1ರಷ್ಟು ಮಾತ್ರ. ಮತಜಾಗೃತಿಗಾಗಿ ಸಂಘಸಂಸ್ಥೆಗಳಿಂದಲೂ ಮಾಧ್ಯಮಗಳಿಂದಲೂ ಹೋಟೆಲ್ ಮೊದಲಾದ ಉದ್ಯಮಗಳಿಂದಲೂ ವಿಶೇಷ ಪ್ರಯತ್ನಗಳು ಈ ಬಾರಿ ಆಗಿದ್ದವು; ಫೇಸ್ಬುಕ್ ಮೊದಲಾದ ಜಾಲತಾಣಗಳ ಮೂಲಕವೂ ಗಣನೀಯ ಪ್ರಯಾಸಗಳು ಆಗಿದ್ದವು. ಆದರೂ ಮತದಾನದ ಪ್ರಮಾಣ ಕಡಮೆ ಮಟ್ಟದಲ್ಲೇ ಉಳಿಯಿತು. ಇದು ಹೀಗೇಕೆಂಬುದು ಯಕ್ಷಪ್ರಶ್ನೆಯಾಗಿದೆ. […]
ನಗರವಾಸಿಗಳಿಗೇಕೆ ಮತದಾನದಲ್ಲಿ ನಿರಾಸಕ್ತಿ?
Month : June-2019 Episode : Author : ಎಸ್.ಆರ್. ರಾಮಸ್ವಾಮಿ