ಧನುರ್ಮಾಸದ ಮತ್ತೊಂದು ಆಕರ್ಷಣೆಯೆಂದರೆ ಎಲೆಗಳ ಮೇಲೆ ಹೂಗಳ ಒಳಗೆ ಕಾಣುತ್ತಿದ್ದ ಅಮೃತದ ಬಿಂದುಗಳು. ಸಂಪಿಗೆ ಮರದ ಕೆಳಗೆ ನಿಂತಾದ ಅಲ್ಲೊಂದು ಇಲ್ಲೊಂದು ಹನಿಗಳು ಕೊರಳಪಟ್ಟಿಯ ಸಂದಿಯಲ್ಲಿ ತೂರಿ ತ್ವಚೆಯನ್ನು ಸ್ಪರ್ಶಿಸಿದಾಗ “ಝಮ್ಮಂದಿ ಸ್ಪರ್ಶಂ; ರೋಮಾಂಚ ಹರ್ಷಂ; ತನು ವೂಗಿಂದಿ ಈ ವೇಲ” ಎಂಬ ಹಾಡು ತ್ವಚೆಯ ಸಕಲ `ಠಿoಡಿe ಅಂದರ್’ಗಳಿಂದಲೂ ಹೊಮ್ಮುತ್ತಿತ್ತು. ಪರ್ಣಪುಷ್ಪಗಳೆಂಬ ಪ್ರಕೃತಿದತ್ತ ಕವಿಗಳಿಗೆ ಸನ್ಮಾನಿಸಲೆಂದೇ ಮೇಘಗಳು ತೊಡಿಸಿದ ಮಣಿಮಾಲೆಗಳಂತೆ ಈ ತಂಬನಿಗಳು (ತಂಪು+ಹನಿ=ತಂಬನಿ; ಹಿಮದೀರ್ಘಸಂಧಿ!) ತೋರುತ್ತವೆ. ಕಾಲವೆಂಬ ಮಡಿವಂತ ಅಡುಗೂಲಜ್ಜಿಯು ಮೋಡದ ತುಣುಕುಗಳನ್ನು ದ್ರವವಾಗಿಸಿ […]
ಧನುರ್ಮಾಸದ ರಸಾಂಬುಗಳು
Month : December-2024 Episode : Author : ಅಣಕು ರಾಮನಾಥ್