
1. ದೇವೇಂದ್ರ ಅವಳನ್ನು ನೋಡುವವರೆಗೆ ಬಹಳ ಕುತೂಹಲವಿತ್ತು ನನಗೆ. ಏಕೆಂದರೆ ಅವಳ ಬಗೆಗೆ ಉಳಿದವರಾಡುತ್ತಿದ್ದ ಬಣ್ಣನೆಯ ಮಾತುಗಳು ಹಾಗಿದ್ದವು. ಬ್ರಹ್ಮದೇವ ಒಂದಿನಿತೂ ಕೊರತೆಯಿಲ್ಲದ ಹೆಣ್ಣನ್ನು ಸೃಷ್ಟಿಸುತ್ತೇನೆ ಎಂದು ಇವಳನ್ನು ನಿರ್ಮಿಸಿದನಂತೆ. ನಮ್ಮ ಊರ್ವಶಿಯ ಚೆಲುವಿಗಿಂತ ಅಧಿಕ ಲಾವಣ್ಯವುಳ್ಳ ಹೆಣ್ಣಂತೆ ಅವಳು… ಹೀಗೆಲ್ಲ ಆಡಿಕೊಳ್ಳುತ್ತಿದ್ದರು. ನನಗೆ ಸ್ತ್ರೀಯರ ವಿಷಯವೇನೂ ಹೊಸತಲ್ಲ. ಬೇಕಾದಷ್ಟು ಅಪ್ಸರೆಯರೂ ಬಯಸಿದಷ್ಟು ಭೋಗವೂ ಕಾಲಬುಡದಲ್ಲೇ ಹರಡಿಕೊಂಡಿತ್ತು. ಅಲ್ಲದೆ ಅತ್ಯಂತ ಸುಂದರಿಯಾದ ಶಚಿ ನನ್ನ ಪತ್ನಿ. ಹೀಗಾಗಿ ಯಾರೋ ಹೇಳಿದ ಮಾತು ಕೇಳಿ ಹಂಬಲಿಸಬೇಕಾದ ದಾರಿದ್ರ್ಯವೇನಿರಲಿಲ್ಲ. ಆದರೂ […]