ಇರುಬ ಎನ್ನುವ ಹೆಸರು ಅಪಭ್ರಂಶವಾಗಿ ಇರ್ಬುವಾಗಿ, ಕೊನೆಯಲ್ಲಿ ಸಾಬಿ ಸೇರಿಕೊಂಡು ಧನ್ಯಾಡಿಯ ಫಾಸಲೆಯ ಹಳ್ಳಿಗಳೆಲ್ಲ ಇರ್ಬುಸಾಬಿಯಾಗಿ ಸಾಕಷ್ಟು ಹೆಸರುವಾಸಿಯಾಗಿದ್ದನು. ಬಹಳ ಎತ್ತರದ ಆಳು ಆಗಿರದ ಇರ್ಬುವು ಬಣ್ಣದಲ್ಲಿ ಕಪ್ಪು. ತುಂಬು ತೋಳಿನ ಬಿಳಿ ಅಂಗಿಯ ಕೈಗಳನ್ನು ಅರ್ಧಕ್ಕೆ ಮಡಚಿದ, ಅದರ ಕಾಲರಿಗೆ ಬೆವರು ಕಂತದೆ ಇರಲಿ ಎಂದು ಕರ್ಚೀಫನ್ನು ಸುತ್ತಿದ, ಬಿಳಿಬಣ್ಣದ ಪೈಜಾಮ ಹಾಗೂ ತಲೆಗೆ ಬಿಳಿ ಟವೆಲ್ಲನ್ನು ಸುತ್ತಿ ಅದರ ಚುಂಗನ್ನು ಹೆಗಲ ಮೇಲೆ ಹಾಕಿಕೊಂಡು ಇರುವುದು ಎಲ್ಲರೂ ನೋಡಿರುವ ಇರ್ಬುವಿನ ಅಲಂಕಾರ. ಅವನ ಮೂಲ […]














