
ಸತ್ಸಂಗತಿಯು ಅತ್ಯಂತ ಮಹತ್ತ್ವದ ಪರಿಣಾಮವನ್ನುಂಟು ಮಾಡುವುದಾಗಿರುತ್ತದೆ. ಸತ್ಪುರುಷರ ಸಹವಾಸವು ಎರಡು ಪ್ರಕಾರದಿಂದ ಆಗಲು ಶಕ್ಯವಿರುತ್ತದೆ. ಒಂದು – ಸತ್ಪುರುಷರ ದೇಹದ ಸಹವಾಸ. ಎರಡು – ಸತ್ಪುರುಷರು ಹೇಳಿದ ಸಾಧನೆ ಮಾಡುತ್ತಿರುವುದರ ಮೂಲಕ ಆಗುವ ಸಹವಾಸ. ಇವುಗಳಲ್ಲಿ ಮೊದಲನೆಯದು ಅಂದರೆ ಸತ್ಪುರುಷರ ದೇಹದ ಸಹವಾಸ ಪ್ರಾಪ್ತವಾಗುವುದು ಬಹಳ ಕಠಿಣ ಹಾಗೂ ದುರ್ಲಭವಾಗಿರುತ್ತದೆ. ಏಕೆಂದರೆ ನಿಜವಾದ ಸತ್ಪುರುಷರನ್ನು ತಿಳಿದುಕೊಳ್ಳುವುದು ಬಹಳ ಕಠಿಣವಿರುತ್ತದೆ. ಅಲ್ಲದೆ ಎಷ್ಟೋ ವೇಳೆ ಅವರ ಹೊರಗಿನ ವ್ಯವಹಾರವನ್ನು ನೋಡಿ ಮನಸ್ಸಿನಲ್ಲಿ ವಿಕಲ್ಪ ಬರುವ ಸಂಭವವಿರುತ್ತದೆ. ಒಂದು ವೇಳೆ […]