* ಶ್ರೀ ಸದ್ಗುರು ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು * ಜಗತ್ತಿನಲ್ಲಿಯ ಅನೇಕ ಸಾಧನೆಗಳನ್ನು ನೋಡಿದರೆ ಎಲ್ಲ ಸಾಧನೆಗಳ ಮೊದಲನೆ ಮೆಟ್ಟಲು ಎಂದರೆ ಮನುಷ್ಯನಿಗೆ ತನ್ನ ಅವಗುಣಗಳು ಕಾಣತೊಡಗುವುದು. ಸಾಧನೆಯು ಬೆಳೆಯುತ್ತಹೋದಂತೆ ನಮ್ಮಲ್ಲಿಯ ಅವಗುಣಗಳು ಪ್ರಖರವಾಗಿ ಕಾಣತೊಡಗುತ್ತವೆ ಹಾಗೂ ಮುಂದೆ ಮುಂದೆ, ಈ ಅವಗುಣಗಳ ಪರ್ವತವೇ ಇದ್ದಂತೆ ಅನ್ನಿಸುತ್ತದೆ. “ಹೇ ಭಗವಂತನೇ, ನಾನು ಇಷ್ಟೆಲ್ಲ ಅವಗುಣಗಳಿಂದ ತುಂಬಿಕೊAಡಿರುವಾಗ ನಿನ್ನ ದರ್ಶನವಾಗಬೇಕೆಂದು ಅಪೇಕ್ಷೆಯನ್ನಾದರೂ ಹೇಗೆ ಮಾಡಲಿ? ಇಂಥ ಪರ್ವತಪ್ರಾಯ ಅವಗುಣಗಳ ರಾಶಿಯೊಳಗಿನಿಂದ ನನಗೆ ನಿನ್ನ ದರುಶನವು ಕಾಲತ್ರಯದಲ್ಲಾದರೂ ಆಗಲು ಶಕ್ಯವೆ?” […]





