ರಾಜ್ಯದ ಹಿಂದೂ ಮಠ-ಮಂದಿರಗಳನ್ನು ಸರ್ಕಾರವು ವಶಪಡಿಸಿಕೊಳ್ಳುವ ಆಶಯದ ಧಾರ್ಮಿಕ ಇಲಾಖೆಯ ಪ್ರಕಟನೆ ಕಳೆದ ಫೆಬ್ರುವರಿ ೭ರಂದು ಬಹಿರಂಗಗೊಂಡ ಕೂಡಲೆ ವ್ಯಾಪಕ ಪ್ರತಿಭಟನೆ ಹೊಮ್ಮಿತು. ಜನಾಕ್ರೋಶಕ್ಕೆ ಮಣಿದು ಮುಖ್ಯಮಂತ್ರಿಗಳು ಮರುದಿನವೇ ತಮ್ಮ ಆದೇಶವನ್ನು ಹಿಂದೆಗೆದುಕೊಂಡರಾದರೂ ಅವರ ಇಂಗಿತವಂತೂ ಬಯಲಾಗಿದೆ. ಸಾಮಾಜಿಕ ಜೀವನದ ಜೀವನಾಡಿಯಾಗಿರುವ ಧಾರ್ಮಿಕ ಸಂಸ್ಥೆಗಳನ್ನು ಸ್ವರೂಪದಲ್ಲಿಯೇ ವ್ಯಾವಹಾರಿಕ ಕಕ್ಷೆಯದಾದ ಸರ್ಕಾರವು ವಶಕ್ಕೆ ತೆಗೆದುಕೊಳ್ಳುವುದು ವ್ಯವಹಾರ್ಯವೆ? – ಎಂಬ ಸಂಗತಿ ಹಾಗಿರಲಿ. ಈ ಇಂಗಿತದ ಹಿಂದಿನ ಚಿಂತನೆಯೇ ಘೋರ ಮನೋವೈಕಲ್ಯವನ್ನು ಸೂಚಿಸುತ್ತದೆ. ಸಾಂಪ್ರದಾಯಿಕ ಧಾರ್ಮಿಕ ಕಟ್ಟಳೆಗಳಿಗೆ ಸೀಮಿತವಾಗದೆ ಧರ್ಮಪೀಠಗಳು […]
“….ವಿಪರೀತ ಬುದ್ಧಿ”
Month : March-2018 Episode : Author : ಎಸ್.ಆರ್. ರಾಮಸ್ವಾಮಿ





