
ಬಂಗ್ಲಾದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. ೧೦ರಷ್ಟು ಇರುವ ಹಿಂದೂ ಸಮುದಾಯವನ್ನು ಬಂಗ್ಲಾದೇಶದಿಂದ ಉಚ್ಚಾಟಿಸಬೇಕೆಂಬುದೇ ಇಸ್ಲಾಮೀ ಪಡೆಗಳು ಹಿಂದಿನಿಂದ ರೂಢಿಸಿಕೊಂಡು ಬಂದಿರುವ ಮಾನಸಿಕತೆ. ಅದರ ಮುಂದುವರಿಕೆಯೇ ಈಗಿನ ಬಂಗ್ಲಾ ವಿದ್ಯಮಾನಗಳ ಮೂಲದಲ್ಲಿರುವುದು. ಆದ್ದರಿಂದ ತೀವ್ರ ರಾಜತಾಂತ್ರಿಕ ಮಾರ್ಗಗಳ ಬಗೆಗೆ ಭಾರತಸರ್ಕಾರ ಗಂಭೀರವಾದ ಚಿಂತನೆ ನಡೆಸಬೇಕಾಗಿದೆ. ಆಧುನಿಕತೆಯ ದಾಪುಗಾಲು ಹೆಜ್ಜೆಗಳು ಎಷ್ಟೇ ರಭಸದವಾಗಿದ್ದರೂ ಮತಾಂಧತೆಯ ಮಾನಸಿಕತೆ ಮಾತ್ರ ಬದಲಾಗದೆಂಬುದನ್ನು ಇತ್ತೀಚಿನ ಬಂಗ್ಲಾದೇಶ ವಿದ್ಯಮಾನಗಳು ಮತ್ತೊಮ್ಮೆ ಸಾಬೀತುಪಡಿಸಿವೆ. ಈ ವರ್ಷದ ನವರಾತ್ರಿ ಪೂಜಾಪರ್ವದ ದಿನಗಳಲ್ಲಿ ಬಂಗ್ಲಾದೇಶದೆಲ್ಲೆಡೆ ಹಿಂದೂ ಸಮುದಾಯದ ಮೇಲೂ ದುರ್ಗಾಪೂಜಾ […]