
ಉಪಕಾರಃ ಪರೋ ಧರ್ಮಃ ಪರಾರ್ಥಂ ಕರ್ಮ ನೈಪುಣಂ | ಪಾತ್ರೇ ದಾನಂ ಪರಃ ಕಾಮಃ ಪರೋ ಮೋಕ್ಷೋ ವಿತೃಷ್ಣತಾ || – ಸುಭಾಷಿತರತ್ನ–ಭಾಂಡಾಗಾರ “ಪರರಿಗೆ ಉಪಕಾರ ಮಾಡುವುದು ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಧರ್ಮ. ಅವಕಾಶ ಕಲ್ಪಿಸಿಕೊಂಡು ಇತರರಿಗಾಗಿ ಹಿತಕರ ಕೆಲಸಗಳನ್ನು ಮಾಡುವುದೇ ಕಾರ್ಯನೈಪುಣ್ಯ. ನೆರವಿನ ಆವಶ್ಯಕತೆ ಇರುವ ಸತ್ಪಾತ್ರರಿಗೆ ದಾನಮಾಡಲು ಉಜ್ಜುಗಿಸುವುದೇ ಶ್ರೇಷ್ಠವಾದ ಸಂಕಲ್ಪ. ಸ್ವಾರ್ಥದ ಆಸೆ ಇಲ್ಲದಿರುವುದೇ ನಿಜವಾದ ಮೋಕ್ಷ.” ಹೊರಗಿನ ಪರಿಮಿತಿಗಳನ್ನು ಗಣಿಸಿ ಪರೋಪಕಾರ ಸಂದರ್ಭಗಳಿAದ ವಿಮುಖರಾಗುವ ಪ್ರವೃತ್ತಿಯನ್ನು ಲೋಕದಲ್ಲಿ ಧಾರಾಳವಾಗಿಯೆ ಕಾಣುತ್ತೇವೆ. ಆದರೆ […]