ಪ್ರಾರಭ್ಯತೇ ನ ಖಲು ವಿಘ್ನಭಯೇನ ನೀಚೈಃ ಪ್ರಾರಭ್ಯ ವಿಘ್ನವಿಹತಾ ವಿರಮನ್ತಿ ಮಧ್ಯಾಃ | ವಿಘ್ನೆಃ ಪುನಃ ಪುನರಪಿ ಪ್ರತಿಹನ್ಯಮಾನಾಃ ಪ್ರಾರಬ್ಧಮುತ್ತಮಗುಣೌ ನ ಪರಿತ್ಯಜನ್ತಿ || – ನೀತಿಶತಕ “ಕಷ್ಟಗಳೂ ತೊಂದರೆಗಳೂ ಬಂದಾವೇನೋ ಎಂದು ಗಾಬರಿಗೊಂಡು ಅಧಮರು ಕೆಲಸವನ್ನು ಆರಂಭಿಸುವುದೇ ಇಲ್ಲ. ಮಧ್ಯಮರು ಆರಂಭಿಸಿದ ಮೇಲೆ ಸ್ವಲ್ಪ ವಿಘ್ನ ಒದಗಿದರೂ ಹಿಂದೆ ಸರಿದುಬಿಡುತ್ತಾರೆ. ಉತ್ತಮರಾದರೋ ಆತಂಕಗಳು ಬಂದರೂ ಧೃತಿಗೆಡದೆ ಅವನ್ನು ದಾಟುತ್ತ ಮುಂದೆ ಸಾಗುತ್ತಾರೆಯೇ ಹೊರತು ಪ್ರಯತ್ನವನ್ನು ಕೈಬಿಡುವುದಿಲ್ಲ.” ಜಗದ್ವ್ಯವಹಾರಗಳಲ್ಲಿ ಅನುತ್ಸಾಹಕರ ಸನ್ನಿವೇಶಗಳು ಎದುರಾಗುವುದು ಪ್ರಕೃತಿಸಹಜವೇ ಆಗಿದೆ. ಎಡರುತೊಡರುಗಳು […]
ದೀಪ್ತಿ
Month : June-2018 Episode : Author : ಎಸ್.ಆರ್. ರಾಮಸ್ವಾಮಿ