ನಮ್ಮ ಸ್ವಾತಂತ್ರ್ಯಪ್ರಾಪ್ತಿಯ ಹಿಂದೆ ದೀರ್ಘಕಾಲದ ಸಂಘರ್ಷ ಇದೆ. ಅಪ್ರತಿಮ ದೇಶಭಕ್ತರು ಸವೆಸಿದ ಕಂಟಕಮಯ ದಾರಿ ಇದೆ. ತಮ್ಮ ಸರ್ವಸ್ವವನ್ನೂ ರಾಷ್ಟçಕ್ಕೆ ಅರ್ಪಿಸಿದ ಸಾವಿರಾರು ಬಲಿದಾನಿಗಳ ರಕ್ತತರ್ಪಣ ಇದೆ. ಆ ಇತಿಹಾಸವನ್ನು ನಾವು ಸ್ವಲ್ಪವಾದರೂ ತಿಳಿದುಕೊಂಡರೆ ಸ್ವಾತಂತ್ರ್ಯ ಎಷ್ಟು ಅಮೂಲ್ಯವಾದದ್ದು ಎನ್ನುವ ಮನವರಿಕೆ ನಮಗೆ ಆಗಬಹುದು. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಭಾರತದ ಜನಮಾನಸದಲ್ಲಿ ಹೆಚ್ಚಿನ ಚೇತರಿಕೆಯುಂಟಾದುದಕ್ಕೆ ಹಲವು ಪ್ರಮುಖ ಪ್ರೇರಕ ಸನ್ನಿವೇಶಗಳನ್ನು ಗುರುತಿಸಬಹುದು. ಒಂದುಕಡೆ ೧೮೫೭ರ ಸ್ವಾತಂತ್ರ್ಯಸಂಘರ್ಷದ ಅವಿಸ್ಮರಣೀಯ ಹೆಜ್ಜೆ ಗುರುತುಗಳು; ಇನ್ನೊಂದುಕಡೆ ಶ್ರೀ ರಾಮಕೃಷ್ಣ ಪರಮಹಂಸರಿಂದ ಉಗಮಗೊಂಡು […]
ವಂಗಭಂಗ ಆಂಗ್ಲರ ಗರ್ವಭಂಗ
Month : August-2024 Episode : Author : ಎಸ್.ಆರ್. ರಾಮಸ್ವಾಮಿ