
ನರಸಿಂಹಯ್ಯನವರ ‘ರಾಮಾಯಣಕೊಕ್ಕೆ’ ಬುದ್ಧಿಯನ್ನು ಕಂಡು ಬೇಸತ್ತ ಜನರು ಹೇಗಾದರೂ ಮಾಡಿ ಅವರ ಈ ಹುಚ್ಚನ್ನು ಬಿಡಿಸಬೇಕೆಂದು ನಿರ್ಧರಿಸಿದರು. ಪಂಡಿತರೂ ಪಾಮರರೂ ಒಗ್ಗೂಡಿದರು. ‘ದೇವನು ರುಜು ಮಾಡಿದನು’ ಎಂಬ ಕುವೆಂಪುರವರ ಕವನವನ್ನು ಕೊಟ್ಟು ಲಿಂಕ್ ಮಾಡಲು ಹೇಳಿದರೆ ಹೇಗೆ?’ – ಎಂದರೊಬ್ಬ ಪಂಡಿತರು. ಅರಮನೆಯ ಸುಖವನ್ನೇ ಬಿಟ್ಟ ಸೀತೆ ಚಿನ್ನದ ಜಿಂಕೆಗಾಗಿ ಆಸೆ ಪಟ್ಟಿದ್ದೇಕೆ?’ ‘ಅಂದು ಅಕ್ಷಯ ತದಿಗೆಯಂತೆ.’ ‘ಭರತನು ಪಾದರಕ್ಷೆಯನ್ನು ಕೊಂಡೊಯ್ದs ಮೇಲೆ ರಾಮನಿಗೆ ಕಲ್ಲುಮುಳ್ಳಿನ ಹಾದಿಯಲ್ಲಿ ಓಡಾಡಲು ಕಷ್ಟ ಆಗಲಿಲ್ಲವೆ?’ ‘ರಾಮನ ಪಾದ ತಗುಲಿದರೆ ಬಂಡೆಯೇ […]