
ಎಚ್. ಮಂಜುನಾಥ ಭಟ್ ಜನರು ಮತ್ತು ಮಠಮಾನ್ಯಗಳು ಕೊಟ್ಟ ಬಿರುದು, ಪ್ರಶಸ್ತಿಗಳ ಸರಮಾಲೆಯೇ ಆಚಾರ್ಯರನ್ನು ಅಲಂಕರಿಸಿತ್ತು. ಸರ್ಕಾರದ ಪ್ರಶಸ್ತಿಗಳ ಹಿಂದೆ ಅವರು ಹೋಗಲಿಲ್ಲ. ವಿದುರನಂತೆ ಸದಾ ಆಡಳಿತಯಂತ್ರಕ್ಕೆ ದಾರಿ ತೋರುತ್ತ, ತಪ್ಪಿನಡೆದಾಗ ಕಿವಿ ಹಿಂಡಿ ಬುದ್ಧಿ ಹೇಳುತ್ತ ಉಳಿದರೇ ವಿನಾ ಎಂದೂ ಅಧಿಕಾರದ ಬಳಿ ನಿಲ್ಲಲಿಲ್ಲ. ಆದರೂ ಸರ್ಕಾರದಿಂದ ಗಮಕ ಸಮ್ಮೇಳನಾಧ್ಯಕ್ಷತೆಯೊಂದಿಗೆ ಗಮಕ ರತ್ನಾಕರ ಪ್ರಶಸ್ತಿ ಬಂದಿತ್ತು. ಸಂಗೀತ–ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ, ವೇದ ಸಂಸ್ಕೃತಿ ಗ್ರಂಥಮಾಲೆಗೆ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ, ಮುಕ್ತ ವಿಶ್ವವಿದ್ಯಾಲಯದ ಗೌರವ […]