ಸಂಗೀತ, ಚಿತ್ರಕಲೆ, ಶಿಲ್ಪಕಲೆ, ಸ್ಥಾಪತ್ಯ, ಆಗಮಶಾಸ್ತ್ರ – ಈ ವಿಷಯಗಳನ್ನು ಕುರಿತು ಸಮರ್ಥವಾಗಿಯೂ ಶಾಸ್ತ್ರಶುದ್ಧವಾಗಿಯೂ ಕನ್ನಡದಲ್ಲಿ ಬರೆಯಬಲ್ಲವರು ಹಿಂದೆ ಹೆಚ್ಚು ಮಂದಿ ಇರಲಿಲ್ಲ, ಈಗಲೂ ಹೆಚ್ಚು ಮಂದಿ ಇಲ್ಲ. ಈ ಬಹು–ಆಯಾಮ ಕ್ಷೇತ್ರದಲ್ಲಿ ರಾಮಚಂದ್ರರಾಯರಷ್ಟು ವಿಶಾಲವಾಗಿ ಕೃಷಿ ಮಾಡಿದವರು ಬಹುಶಃ ಬೇರೆ ಇರಲಿಲ್ಲ. ರಾಮಚಂದ್ರರಾಯರು ಸ್ವತಃ ವೀಣಾವಾದಕರೂ ಚಿತ್ರಕಾರರೂ ಶಿಲ್ಪಕಾರರೂ ಆಗಿದ್ದುದು ಸುವಿದಿತವೇ ಆಗಿದೆ. ಈ ಹಲವು ಕ್ಷೇತ್ರಗಳಲ್ಲಿ ಅಪೂರ್ವ ಒಳನೋಟಗಳನ್ನೂ ಅವರು ಬೆಳೆಸಿಕೊಂಡಿದ್ದರು. ಅವರು ರಚಿಸಿದ ಚಿತ್ರಗಳು ಮತ್ತು ಶಿಲ್ಪಗಳೇ ಒಂದು ದೊಡ್ಡ ಪ್ರದರ್ಶನಕ್ಕೆ ಆಗುವಷ್ಟು […]












