ಸಂಪಾದಕೀಯ ವಿಜ್ಞಾನ-ತಂತ್ರಜ್ಞಾನಗಳು ಮಾನವತೆಯ ಹಾಗೂ ಇಡೀ ಜೀವರಾಶಿಯ ಹಿತದ ಸಾಧನೆಗಾಗಿ ಮಾತ್ರ ನಡೆಯುವುದು ಆಪೇಕ್ಷಣೀಯ ಎಂದು ಹೇಳುವುದು ಚರ್ವಿತಚರ್ವಣವಾದೀತು. ಆದರೆ ಇಂದು ತದ್ವಿರುದ್ಧ ಸ್ಥಿತಿಯೇ ಇದೆ. ವೈಜ್ಞಾನಿಕ ಸಂಶೋಧನೆಯ ಸಿಂಹಪಾಲು ಸಮರಸಂಬಂಧಿತ ಆವಿಷ್ಕರಣಗಳಿಗೇ ಮೀಸಲಾಗಿರುತ್ತದೆ. ಎಲ್ಲ ಪ್ರಬಲ ದೇಶಗಳಲ್ಲಿಯೂ ಇದೇ ಸ್ಥಿತಿ ಇದೆ. ಸಮರೋಪಯೋಗಿ ಶೋಧಗಳು ಮುಂದುವರಿದಂತೆ ಸ್ವಯಂ ವಿಜ್ಞಾನಿಗಳಲ್ಲಿಯೂ ಅವುಗಳ ಪಶ್ಚಾತ್ಪರಿಣಾಮಗಳನ್ನು ನಿಯಂತ್ರಿಸುವ ಶಕ್ತಿ ಉಳಿದಿರುವುದಿಲ್ಲ. ವಿಜ್ಞಾನ-ತಂತ್ರಜ್ಞಾನ ನಿರತರು ಸಾಮಾಜಿಕ ಹೊಣೆಗಾರಿಕೆಯನ್ನು ಆಧಾರಮೌಲ್ಯವಾಗಿ ಸ್ವೀಕರಿಸಿ ವರ್ತಿಸುವುದನ್ನು ಬಿಟ್ಟು ಬೇರೆ ಪರಿಹಾರ ಇರದು; ‘ಮಹತೀವಿನಷ್ಟಿಃ’ ಎಂಬ ದುಷ್ಪರಿಣಾಮಸರಣಿಯಿಂದ […]
ಪ್ರಕೃತಿಯ ಸೇಡು
Month : April-2020 Episode : Author :




