
ಈಗ್ಗೆ ನಾಲ್ಕು ದಶಕಗಳ ಹಿಂದೆ ದೇಶದ ರಾಜಕೀಯ ಪರಿಸರವನ್ನು ಪರಾಮರ್ಶಿಸಿದ ವಿಶ್ಲೇಷಕರನೇಕರು ದೇಶದಲ್ಲಿ ಏಕಪಕ್ಷಸರ್ಕಾರಗಳ ಕಾಲ ಮುಗಿದಿದೆಯೆಂದೂ ಇನ್ನು ಮುಂದೆ ಸಮ್ಮಿಶ್ರಸರ್ಕಾರಗಳಿಗಷ್ಟೆ ಅವಕಾಶ ಇರುತ್ತದೆಂದೂ ಅಭಿಪ್ರಾಯಪಟ್ಟಿದ್ದರು. ಅಲ್ಲಿಂದೀಚೆಗೆ ಬಗೆಬಗೆಯ ಪಕ್ಷಮಿಶ್ರಣಪ್ರಯೋಗಗಳು ನಡೆದಿರುವುದನ್ನು ಜನ ನೋಡಿದ್ದಾರೆ. ಮಿಶ್ರಸರ್ಕಾರಗಳ ಸಾಧಕಬಾಧಕಗಳ ಹಲವಾರು ರೀತಿಯ ಅನುಭವಗಳು ಆಗಿವೆ. ಕರ್ನಾಟಕದಲ್ಲಿಯೇ ಈ ಹಿಂದೆ ಮೈತ್ರಿಸರ್ಕಾರ ಪ್ರಯೋಗ ಹೇಗೆ ಸಾಗಿತ್ತೆಂಬುದನ್ನು ಜನ ಮರೆತಿರಲಾರರು. 1999ರಲ್ಲಿ ಪ್ರಧಾನಿಯಾದ ವಾಜಪೇಯಿಯವರು ನಾಲ್ಕಾರು ಪಕ್ಷಗಳನ್ನು ಸೇರಿಸಿಕೊಂಡು ಪೂರ್ಣಾವಧಿ ಸರ್ಕಾರವನ್ನು ಯಶಸ್ವಿಯಾಗಿ ನಡೆಸಿದುದು ಮೈತ್ರಿಸರ್ಕಾರಗಳ ಇತಿಹಾಸದ ಸುವರ್ಣಾಧ್ಯಾಯವೆಂದು ಅಂಕಿತಗೊಂಡಿತ್ತು. ಅದಕ್ಕೆ […]